Publish Date: Sun, 25 Mar 2018 (10:53 IST)
Updated Date: Sun, 25 Mar 2018 (10:55 IST)
ಡೆಹ್ರಾಡೂನ್: ಪತ್ನಿಗೆ ಗೃಹ ಹಿಂಸೆ ನೀಡಿದ ಆರೋಪಕ್ಕೊಳಗಾಗಿರುವ ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಕಾರು ಅಪಘಾತಕ್ಕೀಡಾಗಿದೆ.
ಉತ್ತರಾಖಂಡ್ ನ ಡೆಹ್ರಾಡೂನ್ ನಲ್ಲಿ ಶಮಿ ಚಲಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದ್ದು, ಶಮಿ ತಲೆಗೆ ಗಾಯವಾಗಿದೆ ಎನ್ನಲಾಗಿದೆ. ತಕ್ಷಣ ಕ್ರಿಕೆಟಿಗನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ತಲೆಯ ಗಾಯಕ್ಕೆ 10 ಹೊಲಿಗೆ ಹಾಕಲಾಗಿದೆ.
ಪತ್ನಿ ಹಸೀನ್ ಜಹಾನ್ ಗೃಹ ಹಿಂಸೆ ನೀಡಿದ ಆರೋಪದಲ್ಲಿ ಇತ್ತೀಚೆಗಷ್ಟೇ ಶಮಿ ವಿರುದ್ಧ ಕೋಲ್ಕೊತ್ತಾ ಪೊಲೀಸರು ಎಫ್ ಐಆರ್ ದಾಖಲಿಸಿದ್ದರು. ಪತ್ನಿ ಮಾಡಿದ ಮ್ಯಾಚ್ ಫಿಕ್ಸಿಂಗ್ ಆರೋಪದ ಬಗ್ಗೆ ತನಿಖೆ ಮಾಡಿದ್ದ ಬಿಸಿಸಿಐ ಮೊನ್ನೆಯಷ್ಟೇ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಇದರ ಬೆನ್ನಲ್ಲೇ ಶಮಿಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ