Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಅಭಿಮಾನಿ ಎನ್ನುತ್ತಲೇ ಭಾರತೀಯರಿಗೇ ಸೋಲುಣಿಸಿದಳು!

ವಿರಾಟ್ ಕೊಹ್ಲಿ ಅಭಿಮಾನಿ ಎನ್ನುತ್ತಲೇ ಭಾರತೀಯರಿಗೇ ಸೋಲುಣಿಸಿದಳು!
ಮುಂಬೈ , ಸೋಮವಾರ, 26 ಮಾರ್ಚ್ 2018 (05:01 IST)
ಮುಂಬೈ: ಡೇನಿಯಲ್ ವ್ಯಾಟ್ ಎಂಬ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಬ್ಯಾಟ್ಸ್ ವುಮನ್ ಗೆ ವಿರಾಟ್ ಕೊಹ್ಲಿ ಎಂದರೆ ಭಾರೀ ಇಷ್ಟ. ಬಹಿರಂಗವಾಗಿಯೇ ಕೊಹ್ಲಿಗೆ ಪ್ರಪೋಸ್ ಮಾಡಿದಾಕೆ ಇದೀಗ ಭಾರತ ಮಹಿಳಾ ಕ್ರಿಕೆಟ್ ತಂಡದ  ಪಾಲಿಗೆ ವಿಲನ್ ಆಗಿಬಿಟ್ಟರು.

ನಿನ್ನೆ ಭಾರತ ಮತ್ತು ಇಂಗ್ಲೆಂಡ್ ನಡುವೆ ಟಿ20 ಪಂದ್ಯದಲ್ಲಿ ಭಾರತದ ಮಹಿಳೆಯರು ದಾಖಲೆಯ 198 ರನ್ ಗಳಿಸಿದ್ದರು. ಈ ಮೊತ್ತ ಬೆಂಬತ್ತುವುದು ಕಷ್ಟವೆಂದೇ ಎಲ್ಲರೂ ಅಂದುಕೊಂಡಿದ್ದರು. ಭಾರತದ ಪರ ಮತ್ತೆ ಸ್ಮೃತಿ ಮಂದಣ್ಣ 40 ಬಾಲ್ ಗಳಲ್ಲಿ ಅತೀ ವೇಗದ 76 ರನ್ ಗಳಿಸಿ ಹೀರೋಯಿನ್ ಆದರು.

ಆದರೆ ಎಲ್ಲರ ಲೆಕ್ಕಾಚಾರ ಉಲ್ಟಾ ಮಾಡಿದ್ದು ಕೊಹ್ಲಿ ಅಭಿಮಾನಿ ವ್ಯಾಟ್. ಆರಂಭಿಕರಾಗಿ ಕಣಕ್ಕಿಳಿದ ವ್ಯಾಟ್ ಕೇವಲ 64 ಬಾಲ್ ಗಳಲ್ಲಿ 15 ಬೌಂಡರಿ, 5 ಸಿಕ್ಸರ್ ಗಳ ನೆರವಿನಿಂದ 124 ಚಚ್ಚಿದರು. ಆ ಮೂಲಕ ಬ್ಯಾಟಿಂಗ್ ನಲ್ಲೂ ತಾನೂ ಕೊಹ್ಲಿಯಂತೇ ಚೇಸಿಂಗ್ ವೀರ ಎಂದು ಸಮರ್ಥಿಸಿದರು. ಕೊಹ್ಲಿ ಇದೇ ರೀತಿ ಚೇಸಿಂಗ್ ಸಂದರ್ಭ ಬಂದರೆ ಮೈ ಮೇಲೆ ಭೂತ ಹೊಕ್ಕವರಂತೆ ಚಚ್ಚುತ್ತಾರೆ. ಅದೇ ರೀತಿ ವ್ಯಾಟ್ ಕೂಡಾ ಭಾರತೀಯ ದಾಳಿಯ ಪುಡಿಗಟ್ಟಿ ತಮ್ಮ ತಂಡಕ್ಕೆ 7 ವಿಕೆಟ್ ಗಳ ದಾಖಲೆಯ ಗೆಲುವು ಕೊಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

Share this Story:

Follow Webdunia kannada

ಮುಂದಿನ ಸುದ್ದಿ

ಕಾರು ಅಪಘಾತದಲ್ಲಿ ಗಾಯಗೊಂಡ ಕ್ರಿಕೆಟಿಗ ಮೊಹಮ್ಮದ್ ಶಮಿ