Select Your Language

Notifications

webdunia
webdunia
webdunia
webdunia

34 ಕೋಟಿ ರೂ. ಐಷಾರಾಮಿ ಮನೆಗೆ ಎಳ್ಳುನೀರು ಬಿಟ್ಟ ವಿರಾಟ್ ಕೊಹ್ಲಿ!

34 ಕೋಟಿ ರೂ. ಐಷಾರಾಮಿ ಮನೆಗೆ ಎಳ್ಳುನೀರು ಬಿಟ್ಟ ವಿರಾಟ್ ಕೊಹ್ಲಿ!
ಮುಂಬೈ , ಶುಕ್ರವಾರ, 23 ಮಾರ್ಚ್ 2018 (11:44 IST)
ಮುಂಬೈ: ವಿರಾಟ್ ಕೊಹ್ಲಿ ಮುಂಬೈಯಲ್ಲಿ 34 ಕೋಟಿ ರೂ.ಗಳ ಐಷಾರಾಮಿ ಮನೆ ಖರೀದಿಸಿದ್ದಾರೆಂದು ಹಿಂದೆ ಸುದ್ದಿ ಬಂದಿತ್ತು. ಆದರೆ ಕೊಹ್ಲಿ ಈಗ ಆ ಮನೆಗಾಗಿ ಮಾಡಿಕೊಂಡಿದ್ದ ಒಪ್ಪಂದ ಮುರಿದುಕೊಂಡಿದ್ದಾರೆ.

ಈ ಮನೆ ಇನ್ನೂ ರೆಡಿಯಾಗದ ಕಾರಣ ಸದ್ಯಕ್ಕೆ ಕೊಹ್ಲಿ ಅಪಾರ್ಟ್ ಮೆಂಟ್ ಒಂದನ್ನು ಎರಡು ವರ್ಷಗಳಿಗೆ ಬಾಡಿಗೆ ಪಡೆದಿದ್ದರು. ಆದರೆ ಈಗ ಬಂದಿರುವ ಸುದ್ದಿ ಪ್ರಕಾರ ಮುಂಬೈಯ ವರ್ಲಿಯಲ್ಲಿ ಐಷಾರಾಮಿ ಅಪಾರ್ಟ್ ಮೆಂಟ್ ಖರೀದಿಗೆ ಕೊಹ್ಲಿ ಮಾಡಿಕೊಂಡಿದ್ದ 34 ಕೋಟಿ ರೂ.ಗಳ ಒಪ್ಪಂದ ರದ್ದುಗೊಳಸಿದ್ದಾರಂತೆ.

ಇದರ ಬದಲು ಕೊಹ್ಲಿ ಬಾಂದ್ರಾ ಅಥವಾ ವರ್ಸೋವಾ ಪ್ರದೇಶದಲ್ಲಿ ಪೆಂಥ್ ಹೌಸ್ ಒಂದಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ 34 ಕೋಟಿ ರೂ.ಗಳ ಮನೆ ಒಪ್ಪಂದ ರದ್ದುಗೊಳಿಸಿದ್ದೇಕೆ ಎಂಬುದಕ್ಕೆ ವ್ಯಕ್ತವಾದ ಕಾರಣ ತಿಳಿದುಬಂದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಗೆ ಕಿರುಕುಳ ಕೊಟ್ಟ ಆರೋಪವಿದ್ದರೂ ಮೊಹಮ್ಮದ್ ಶಮಿಗೆ ಕ್ಲೀನ್ ಚಿಟ್ ನೀಡಿದ ಬಿಸಿಸಿಐ