Publish Date: Mon, 19 Mar 2018 (10:53 IST)
Updated Date: Mon, 19 Mar 2018 (10:55 IST)
ಕೊಲೊಂಬೊ: ರನ್ ಮೆಷಿನ್ ವಿರಾಟ್ ಕೊಹ್ಲಿ ಇಲ್ಲದೆಯೂ ಟೀಂ ಇಂಡಿಯಾ ಗೆಲುವು ಕಂಡಿದೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ರೋಹಿತ್ ಶರ್ಮಾ ನೇತೃತ್ವದಲ್ಲಿ ತ್ರಿಕೋನ ಟಿ20 ಸರಣಿ ಗೆದ್ದು ಬೀಗಿದೆ.
ಈ ಗೆಲುವಿಗೆ ರೋಹಿತ್ ಬಳಗಕ್ಕೆ ಕ್ರಿಕೆಟ್ ದಿಗ್ಗಜರೆಲ್ಲರೂ ಶುಭ ಹಾರೈಸಿದ್ದಾರೆ. ಇಡೀ ಲೋಕವೇ ಟೀಂ ಇಂಡಿಯಾ ಕೊಂಡಾಡುತ್ತಿರುವಾಗ ಖಾಯಂ ನಾಯಕ ವಿರಾಟ್ ಕೊಹ್ಲಿ ಒಂದೂ ಮಾತು ಹೇಳದಿದ್ದರೆ ಹೇಗೆ?
ಕೊಹ್ಲಿ ಕೂಡಾ ಟೀಂ ಇಂಡಿಯಾ ಗೆಲುವು ನೋಡಿ ಖುಷಿ ಪಟ್ಟಿದ್ದು, ಟ್ವಿಟರ್ ನಲ್ಲಿ ಕೊಂಡಾಡಿದ್ದಾರೆ. ‘ಕಳೆದ ರಾತ್ರಿ ಅದೆಂಥಾ ಅದ್ಭುತ ಪಂದ್ಯವಾಗಿತ್ತು. ಇದು ಸಂಪೂರ್ಣ ಸಾಂಘಿಕ ಆಟ. ವೆಲ್ ಡನ್ ಡಿಕೆ!’ ಎಂದು ಕೊಹ್ಲಿ ಖುಷಿ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ