Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ನಡೆದಿದೆ ಒಂದು ವಿಚಿತ್ರ!

ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ನಡೆದಿದೆ ಒಂದು ವಿಚಿತ್ರ!
ಸಿಡ್ನಿ , ಸೋಮವಾರ, 26 ಮಾರ್ಚ್ 2018 (05:25 IST)
ಸಿಡ್ನಿ: ದ. ಆಫ್ರಿಕಾ –ಆಸ್ಟ್ರೇಲಿಯಾ ನಡುವೆ ಕೇಪ್ ಟೌನ್ ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯ ಹಲವಾರು ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಗಿದೆ.

ಈ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರ ಕ್ಯಾಮರೂನ್ ಬ್ಯಾನ್ ಕ್ರೋಫ್ಟ್ ಬಾಲ್ ಟೆಂಪರಿಂಗ್ ಮಾಡಿ ಸಿಕ್ಕಿಬಿದ್ದ ಬೆನ್ನಲ್ಲೇ ಆಸೀಸ್ ನಾಯಕ ಸ್ಟೀವ್ ಸ್ಮಿತ್ ಮತ್ತು ಬಳಗ ತೀವ್ರ ಟೀಕೆಗೆ ಗುರಿಯಾಗಿದೆ.

ಈ ಹಿನ್ನಲೆಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ತನಿಖೆಗೆ ಆದೇಶಿಸಿದೆ. ಇದೆಲ್ಲಾ ಘಟನೆಗಳಿಂದ ತೀವ್ರ ಮುಜುಗರಕ್ಕೊಳಗಾಗಿರುವ ನಾಯಕ ಸ್ಟೀವ್ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ ಈ ಟೆಸ್ಟ್ ಪಂದ್ಯದ ಅಂತ್ಯದವರೆಗೆ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ.

ಅಂದರೆ ಈ ಪಂದ್ಯದ ಅಂತ್ಯದವರೆಗೆ ಇವರಿಬ್ಬರು ತಂಡದಲ್ಲಿ ಸಾಮಾನ್ಯ ಆಟಗಾರರಾಗಿರುತ್ತಾರೆ. ವಿಕೆಟ್ ಕೀಪರ್ ಟಿಮ್ ಪೇಯ್ನ್ ತಂಡವನ್ನು ಮುನ್ನಡೆಸಲಿದ್ದಾರೆ. ಅಂತೂ ಬಾಲ್ ಟೆಂಪರಿಂಗ್ ಪ್ರಕರಣದಿಂದ ಆಸ್ಟ್ರೇಲಿಯಾ ತಂಡದ ಮಾನ ಹರಾಜಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಾಕ್ಟೀಸ್ ಬಿಟ್ಟು ಧೋನಿ ಈ ಹುಡುಗನ ಜತೆ ಮಾಡಿದ್ದೇನು?