Publish Date: Mon, 26 Mar 2018 (05:04 IST)
Updated Date: Mon, 26 Mar 2018 (05:06 IST)
ಚೆನ್ನೈ: ಐಪಿಎಲ್ ಗೆ ಭರ್ಜರಿ ತಯಾರಿ ಆರಂಭಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಈಗಾಗಲೇ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ.
ಚೆನ್ನೈಯಲ್ಲಿ ಪ್ರಾಕ್ಟೀಸ್ ನಡುವೆ ಧೋನಿ ಕೆಲವು ಅಭಿಮಾನಿಗಳೊಂದಿಗೆ ಕಾಲ ಕಳೆದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿ ಕುಟುಂಬವೊಂದನ್ನು ಮೈದಾನದಲ್ಲಿ ಭೇಟಿ ಮಾಡಿದ ಧೋನಿ ಆ ಕುಟುಂಬದ ಸಣ್ಣ ಮಗುವಿನೊಂದಿಗೆ ಹೈ ಫೈವ್ ಗೇಮ್ ಆಡಿದ್ದಾರೆ.
ಈಗಾಗಲೇ ಧೋನಿ ಸಿಎಸ್ ಕೆ ಪ್ರಮೋಷನಲ್ ವಿಡಿಯೋದಲ್ಲಿ ಹಾಡಿಗೆ ನೃತ್ಯ ಮಾಡಿ ಸುದ್ದಿಯಾಗಿದ್ದಾರೆ. ಎರಡು ವರ್ಷಗಳ ನಂತರ ಮತ್ತೆ ಕಣಕ್ಕಿಳಿಯುತ್ತಿರುವ ಸಿಎಸ್ ಕೆ ತಂಡವನ್ನು ಮತ್ತೆ ಕಟ್ಟುವಲ್ಲಿ ಧೋನಿ ಬ್ಯುಸಿಯಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ