Publish Date: Sat, 27 Jan 2018 (08:57 IST)
Updated Date: Sat, 27 Jan 2018 (09:00 IST)
ಜೊಹಾನ್ಸ್ ಬರ್ಗ್: ತೃತೀಯ ಟೆಸ್ಟ್ ಪಂದ್ಯ ನಡೆಯುತ್ತಿರುವ ಜೊಹಾನ್ಸ್ ಬರ್ಗ್ ನ ವಾಂಡರರ್ಸ್ ಮೈದಾನದ ಪಿಚ್ ಬಗ್ಗೆ ಮಾಜಿ ಆಟಗಾರರು ಟೀಕೆ ಮಾಡುತ್ತಿದ್ದರೆ ಭಾರತೀಯ ಆಟಗಾರರು ಅದನ್ನು ನಿರಾಕರಿಸಿದ್ದಾರೆ.
ಮೈ ಮೇಲೆ ಬಾಲ್ ಚಿಮ್ಮಿ ಬರುತ್ತಿದ್ದು ಆಟಗಾರರಿಗೆ ಗಾಯವಾಗುತ್ತಿದ್ದರೂ ಟೀಂ ಇಂಡಿಯಾ ಮಾತ್ರ ಇದನ್ನು ಒಂದು ಅಪಾಯಕಾರಿ ಪಿಚ್ ಎಂದು ಹೇಳಲು ನಿರಾಕರಿಸಿದೆ. ದಿನದಾಟದ ನಂತರ ಮಾತನಾಡಿದ ಅಜಿಂಕ್ಯಾ ರೆಹಾನೆ ಇದೊಂದು ಸವಾಲಿನ ಪಿಚ್ ಆದರೆ ಅಪಾಯಕಾರಿ ಅಲ್ಲ ಎಂದಿದ್ದಾರೆ.
ಆದರೆ ಅತ್ತ ಆಫ್ರಿಕಾ ಆಟಗಾರರು ಅಂಪಾಯರ್ ತೀರ್ಮಾನಕ್ಕೆ ಬದ್ಧರಾಗಲು ತೀರ್ಮಾನಿಸಿದ್ದಾರೆ. ಪಂದ್ಯ ಮುಂದುವರಿಯಬೇಕೋ, ಬೇಡವೋ ಎಂಬುದನ್ನು ಅಧಿಕಾರಿಗಳು ತೀರ್ಮಾನಿಸಿದರೆ ಅದಕ್ಕೆ ಬದ್ಧರಿರುವುದಾಗಿ ಆಫ್ರಿಕಾ ಹೇಳಿಕೊಂಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ