Publish Date: Sat, 27 Jan 2018 (06:13 IST)
Updated Date: Sat, 27 Jan 2018 (06:18 IST)
ಮುಂಬೈ : ಟೀಂ ಇಂಡಿಯಾ ಹಾಗು ದಕ್ಷಿಣ ಆಫ್ರಿಕಾ ವಿರುದ್ದ ನಡೆಯುತ್ತಿರುವ ಟೆಸ್ಟ್ ಪಂದ್ಯ ಭಾನುವಾರ ಕೊನೆಯಾಗಲಿದ್ದು, ಈಗ ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ ಹಾಗು ಸಹ ಆಟಗಾರರು ದಕ್ಷಿಣ ಆಫ್ರಿಕಾ ವಿರುದ್ದ ಏಕದಿನ ಸರಣಿ ಪಂದ್ಯಕ್ಕಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾರೆ.
ಈ ಮಧ್ಯ ವಿಮಾನ ನಿಲ್ದಾಣದಲ್ಲಿ ಧೋನಿ ಅವರಿಗೆ ದಕ್ಷಿಣ ಆಫ್ರಿಕಾದ ಜಾಂಟಿರೋಡ್ಸ್ ಅವರ ಪತ್ನಿ ಹಾಗು ಮಕ್ಕಳಾದ ಇಂಡಿಯಾ ಹಾಗು ನಾಥನ್ ಎದುರಾಗಿದ್ದರು. ಆ ವೇಳೆ ಧೋನಿ ಅವರು ಇಂಡಿಯಾ ಜೊತೆ ಎಂಜಾಯ್ ಮಾಡುತ್ತಿರುವ ಫೋಟೋವೊಂದನ್ನು ಜಾಂಟಿ ರೋಡ್ಸ್ ಅವರು ಟ್ವೀಟ್ ಮಾಡಿದ್ದು ಧೋನಿ ಅವರು ತಮ್ಮ ಮಕ್ಕಳಿಂದ ಸಲಹೆ ಪಡೆಯುತ್ತಿದ್ದಾರೆ ಎಂದು ತಮಾಷೆಯಾಗಿ ಹೇಳಿದ್ದಾರೆ. ಹಾಗೆ ತಮ್ಮ ಕುಟುಂಬದವರ ಬಗ್ಗೆ ತಾವೇನು ಭಯ ಪಡಬೇಕಿಲ್ಲ. ಏಕೆಂದರೆ ತಮ್ಮ ಮಕ್ಕಳು ಧೋನಿ ಅವರ ಬಳಿ ಸುರಕ್ಷಿತವಾಗಿದ್ದಾರೆ ಎಂದು ಹೇಳಿ ಧೋನಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ