Publish Date: Sat, 27 Jan 2018 (07:14 IST)
Updated Date: Sat, 27 Jan 2018 (07:16 IST)
ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವಿನ ತೃತೀಯ ಟೆಸ್ಟ್ ಪಂದ್ಯ ನಡೆಯುತ್ತಿರುವ ಜೊಹಾನ್ಸ್ ಬರ್ಗ್ ನ ವಾಂಡರರ್ಸ್ ಪಿಚ್ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಪಿಚ್ ಮೂರನೇ ದಿನಕ್ಕೆ ಸಂಪೂರ್ಣ ಹದಗೆಟ್ಟಿದ್ದು, ಬಿರುಕು ಅಗಲವಾಗುತ್ತಿದೆ. ಇದರಿಂದ ಬಾಲ್ ಅತಿಯಾಗಿ ಬೌನ್ಸ್ ಆಗುತ್ತಿದ್ದು, ಆಗಾಗ ಭಾರತೀಯ ಬ್ಯಾಟ್ಸ್ ಮನ್ ಗಳ ಗ್ಲೌಸ್ ಗೆ ಬಡಿಯುತ್ತಿತ್ತು. ಇದರಿಂದ ಕ್ರಿಕೆಟಿಗರು ನೋವು ಅನುಭವಿಸುವಂತಾಯಿತು.
ಈ ಪಿಚ್ ನ ಸ್ಥಿತಿ ನೋಡಿ ಮಾಜಿ ಕ್ರಿಕೆಟಿಗರು, ಕಾಮೆಂಟೇಟರ್ ಗಳು ಟೀಕೆ ಮಾಡಿದ್ದಾರೆ. ಇದೊಂದು ಕಳಪೆ ಪಿಚ್ ಆಗಿದ್ದು, ಆಟವನ್ನು ನಿಲ್ಲಿಸುವುದು ಒಳಿತು ಎಂದು ಕಮೆಂಟೇಟರ್, ಮಾಜಿ ಕ್ರಿಕೆಟಿಗ ಮೈಕಲ್ ಹೋಲ್ಡಿಂಗ್ ಅಭಿಪ್ರಾಯಪಟ್ಟಿದದ್ದಾರೆ. ಭಾರತದ ಮಾಜಿ ನಾಯಕ ಗಂಗೂಲಿ, ಸುನಿಲ್ ಗವಾಸ್ಕರ್ ಕೂಡಾ ಐಸಿಸಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ