ಜೊಹಾನ್ಸ್ ಬರ್ಗ್: ಚೆಂಡು ವಿರೂಪಗೊಳಿಸಿದ ಆರೋಪದಲ್ಲಿ ವಿಲನ್ ಗಳಾಗಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ ಗೆ ಇಷ್ಟು ದಿನ ಕೊಂಡಾಡುತ್ತಿದ್ದ ಅಭಿಮಾನಿಗಳೇ ಛೀಮಾರಿ ಹಾಕಿದ್ದಾರೆ.
									
			
			 
 			
 
 			
					
			        							
								
																	ಜೊಹಾನ್ಸ್ ಬರ್ಗ್ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಸ್ಟೀವ್ ಸ್ಮಿತ್ ರನ್ನು ನೋಡಿದ ಅಭಿಮಾನಿಗಳು ‘ಚೀಟ್ ಚೀಟ್’ ಎಂದು ಕೂಗಿ ಅವಮಾನ ಮಾಡಿದ್ದಾರೆ. ಈ ವೇಳೆ ಸ್ಮಿತ್ ಗೆ ಯಾವುದೇ ತೊಂದರೆಯಾಗದಂತೆ ಪೊಲೀಸರು ಬಿಗಿ ಭದ್ರತೆಯಲ್ಲಿ ಕರೆದೊಯ್ದಿದ್ದಾರೆ.
									
										
								
																	ಇಂದು ಸಂಜೆ ತಮ್ಮ ತವರು ಸಿಡ್ನಿಯಲ್ಲಿ ಸ್ಟೀವ್ ಸ್ಮಿತ್ ಪತ್ರಿಕಾಗೋಷ್ಠಿ ನಡೆಸಲಿದ್ದು, ಆ ಸಂದರ್ಭದಲ್ಲಿ ಮತ್ತಷ್ಟು ಅವಮಾನವಾಗುವ ಸಾಧ್ಯತೆಯಿದೆ. ಅಂತೂ ಮಾಡಿದ ತಪ್ಪಿಗೆ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಬ್ಯಾನ್ ಕ್ರಾಫ್ಟ್ ಶಿಕ್ಷೆ ಅನುಭವಿಸುತ್ತಿದ್ದಾರೆ.
									
											
							                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ