Publish Date: Thu, 29 Mar 2018 (13:44 IST)
Updated Date: Thu, 29 Mar 2018 (13:46 IST)
ಹೈದರಾಬಾದ್: ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಎಲ್ಲಾ ತಂಡಗಳಿಗೂ ಭಾರತೀಯರೇ ನಾಯಕರಾಗುವ ದಾಖಲೆಯೊಂದು ಸ್ವಲ್ಪದರಲ್ಲೇ ಮಿಸ್ ಆಯಿತು. ಹೈದರಾಬಾದ್ ತಂಡ ಈ ದಾಖಲೆಯಾಗಲು ಬಿಡಲಿಲ್ಲ.
ಹೈದರಾಬಾದ್ ಹೊರತುಪಡಿಸಿ ಉಳಿದೆಲ್ಲಾ ತಂಡಗಳಿಗೆ ಭಾರತೀಯ ಕ್ರಿಕೆಟಿಗರೇ ನಾಯಕರಾಗಿದ್ದಾರೆ. ಆದರೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ರಾಜೀನಾಮೆಯ ನಂತರ ತೆರವಾದ ಹೈದರಾಬಾದ್ ಸನ್ ರೈಸರ್ಸ್ ತಂಡದ ನಾಯಕತ್ವ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಪಾಲಾಗಿದೆ.
ಇದಕ್ಕೂ ಮೊದಲು ಶಿಖರ್ ಧವನ್ ನಾಯಕರಾಗಬಹುದು ಎಂದು ಊಹಿಸಲಾಗಿತ್ತು. ಆದರೆ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದ ಹೈದರಾಬಾದ್ ಫ್ರಾಂಚೈಸಿ ವಾರ್ನರ್ ಸ್ಥಾನಕ್ಕೆ ಇನ್ನೊಬ್ಬ ವಿದೇಶೀ ನಾಯಕನನ್ನೇ ಆರಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ