Select Your Language

Notifications

webdunia
webdunia
webdunia
Friday, 18 April 2025
webdunia

ಐಪಿಎಲ್: ಸ್ಟೀವ್ ಸ್ಮಿತ್ ಬದಲಿಗೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಬರಲಿದ್ದಾನೆ ಈ ಕ್ರಿಕೆಟಿಗ

ಸ್ಟೀವ್ ಸ್ಮಿತ್
ನವದೆಹಲಿ , ಶನಿವಾರ, 31 ಮಾರ್ಚ್ 2018 (09:52 IST)
ನವದೆಹಲಿ: ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಆಡುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕರಾಗಿದ್ದ ಸ್ಟೀವ್ ಸ್ಮಿತ್ ಕನಸು ಭಗ್ನಗೊಂಡಿದೆ. ಬಾಲ್ ವಿರೂಪ ಪ್ರಕರಣದಿಂದ ಕಳಂಕಿತರಾಗಿ ನಿಷೇಧಕ್ಕೊಳಗಾಗಿರುವ ಸ್ಮಿತ್ ಜಾಗಕ್ಕೆ ರಾಜಸ್ಥಾನ್ ತಂಡ ಹೊಸ ಕ್ರಿಕೆಟಿಗನನ್ನು ಖರೀದಿಸಲಿದೆ.

ಮೂಲಗಳ ಪ್ರಕಾರ ಸ್ಮಿತ್ ಬದಲಿಗೆ ಸಮರ್ಥ ಬ್ಯಾಟ್ಸ್ ಮನ್ ಒಬ್ಬರಿಗಾಗಿ ರಾಜಸ್ಥಾನ್ ತಂಡ ಹುಡುಕಾಟ ನಡೆಸಿದೆ. ಹೀಗಾಗಿ ದ.ಆಫ್ರಿಕಾ ಮೂಲದ ಬ್ಯಾಟ್ಸ್ ಮನ್ ಕ್ಲಾಸೆನ್ ರನ್ನು ತಂಡಕ್ಕೆ ಕರೆಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆಯಂತೆ.

ಆಫ್ರಿಕಾದ  ಅನುಭವಿ ಆಟಗಾರನನ್ನು ಕೊಳ್ಳಲು ಈಗಾಗಲೇ ರಾಜಸ್ಥಾನ್ ತಯಾರಿ ನಡೆಸಿದೆ. ಐಪಿಎಲ್ ನಿಂದ ಹೊರ ಬಿದ್ದಿರುವ ಸ್ಮಿತ್ ಮತ್ತು ವಾರ್ನರ್ ಜಾಗಕ್ಕೆ ಬದಲಿ ಆಟಗಾರರನ್ನು ಕೊಳ್ಳಲು ರಾಜಸ್ಥಾನ್ ಮತ್ತು ಹೈದರಾಬಾದ ತಂಡಕ್ಕೆ ಐಪಿಎಲ್ ಆಡಳಿತ ಮಂಡಳಿ ಅವಕಾಶ ಮಾಡಿಕೊಟ್ಟಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೇಸರದಲ್ಲಿರುವ ಮೊಮ್ಮಗನಿಗೆ ಬಂಪರ್ ಆಫರ್ ಕೊಟ್ಟ ಎಚ್ ಡಿ ದೇವೇಗೌಡ