Select Your Language

Notifications

webdunia
webdunia
webdunia
webdunia

ನಿಷೇಧದ ಮೇಲೆ ಮೇಲ್ಮನವಿ ಸಲ್ಲಿಸಲ್ಲ ಎಂದ ಸ್ಟೀವ್ ಸ್ಮಿತ್

ನಿಷೇಧದ ಮೇಲೆ ಮೇಲ್ಮನವಿ ಸಲ್ಲಿಸಲ್ಲ ಎಂದ ಸ್ಟೀವ್ ಸ್ಮಿತ್
ಸಿಡ್ನಿ , ಬುಧವಾರ, 4 ಏಪ್ರಿಲ್ 2018 (13:50 IST)
ಸಿಡ್ನಿ: ಬಾಲ್ ವಿರೂಪ ಪ್ರಕರಣದಲ್ಲಿ ಕಳಂಕಿತನಾಗಿ ಕ್ರಿಕೆಟ್ ಆಸ್ಟ್ರೇಲಿಯಾದಿಂದ ಒಂದು ವರ್ಷ ನಿಷೇಧಕ್ಕೊಳಗಾಗಿರುವ ಕ್ರಿಕೆಟಿಗ ಸ್ಟೀವ್ ಸ್ಮಿತ್ ತಮ್ಮ ಮೇಲೆ ವಿಧಿಸಿರುವ ಶಿಕ್ಷೆ ವಿರುದ್ಧ ಮೇಲ್ಮನವಿ ಸಲ್ಲಿಸಲ್ಲ ಎಂದಿದ್ದಾರೆ.
 

ಆಸ್ಟ್ರೇಲಿಯಾ ಕ್ರಿಕೆಟಿಗರ ಸಂಘ ನಿನ್ನೆಯಷ್ಟೇ ಮೂವರು ಕ್ರಿಕೆಟಿಗರ ಮೇಲಿನ ನಿಷೇಧ ಅವಧಿ ಕಡಿತಗೊಳಿಸುವಂತೆ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಮನವಿ ಮಾಡಿತ್ತು. ಆದರೆ ಸ್ಮಿತ್ ತಮಗೆ ಸಿಕ್ಕಿರುವ ಶಿಕ್ಷೆ ಅನುಭವಿಸಲು ಸಿದ್ಧರಿರುವುದಾಗಿ ಹೇಳಿಕೊಂಡಿದ್ದಾರೆ.

‘ನಾನು ಈ ತಪ್ಪಿಗೆ ಯಾವುದೇ ಶಿಕ್ಷೆ ಅನುಭವಿಸಲು ಸಿದ್ಧ. ನಾಯಕನಾಗಿ ಸಂಪೂರ್ಣ ಜವಾಬ್ದಾರಿ ಹೊರುತ್ತೇನೆ ಎಂದಿದ್ದೆ. ಅದಕ್ಕೆ ಸಂಪೂರ್ಣವಾಗಿ ಬದ್ಧನಾಗಿದ್ದೇನೆ. ಶಿಕ್ಷೆ ವಿರುದ್ಧ ಹೋಗುವುದಿಲ್ಲ’ ಎಂದು ಸ್ಮಿತ್ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೈನಿಕನ ಅವತಾರದಲ್ಲಿ ಪದ್ಮ ಪ್ರಶಸ್ತಿ ಸ್ವೀಕರಿಸಿದ್ದರ ಕಾರಣ ಬಯಲು ಮಾಡಿದ ಧೋನಿ