Publish Date: Wed, 04 Apr 2018 (12:36 IST)
Updated Date: Wed, 04 Apr 2018 (12:38 IST)
ರಾಂಚಿ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ, ರಾಷ್ಟ್ರಪತಿ ಭವನದಲ್ಲಿ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸುವಾಗ ಸೈನಿಕನ ದಿರಿಸಿನಲ್ಲಿ, ಯೋಧನಂತೆ ಸಾಗಿ ಪ್ರಶಸ್ತಿ ಸ್ವೀಕರಿಸಿದ್ದರ ಹಿಂದಿನ ಕಾರಣ ವಿವರಿಸಿದ್ದಾರೆ.
ಧೋನಿ ಸೈನಿಕನ ಹೆಜ್ಜೆಯಲ್ಲಿ ನಡೆದು ಪ್ರಶಸ್ತಿ ಸ್ವೀಕರಿಸುತ್ತಿರುವ ವಿಡಿಯೋ ಭಾರೀ ವೈರಲ್ ಆಗಿತ್ತು. ಅಷ್ಟೇ ಅಲ್ಲ, ಟ್ವಿಟರ್ ನಲ್ಲಿ ಧೋನಿಗೆ ಪ್ರಶಂಸೆಯ ಸುರಿಮಳೆಯೇ ವ್ಯಕ್ತವಾಗಿತ್ತು. ಇದೀಗ ಕ್ಯಾಪ್ಟನ್ ಕೂಲ್ ತಮ್ಮ ಈ ನಡೆಯ ಹಿಂದಿನ ಉದ್ದೇಶ ಬಹಿರಂಗಪಡಿಸಿದ್ದಾರೆ.
‘ನಾವು ನೆಮ್ಮದಿಯಿಂದ ಮಲಗಿ ನಿದ್ರಿಸುತ್ತೇವೆಂದರೆ ಅದಕ್ಕೆ ಯೋಧರ ತ್ಯಾಗ ಕಾರಣ. ಅಂತಹ ವೀರ ಯೋಧರಿಗೆ ಈ ಪ್ರಶಸ್ತಿ ಸಮರ್ಪಿಸಲು ಇಷ್ಟಪಡುತ್ತೇನೆ. ಅವರ ಸ್ಮರಣೆಗಾಗಿಯೇ ಹೆಮ್ಮೆಯಿಂದ ಯೋಧನ ದಿರಿಸಿನಲ್ಲಿ ಪ್ರಶಸ್ತಿ ಸ್ವೀಕರಿಸಿದೆ’ ಎಂದು ಧೋನಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಧೋನಿ ಕೂಡಾ ಸೇನೆಯ ಗೌರವಯುತ ಸದಸ್ಯರಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ