Publish Date: Tue, 03 Apr 2018 (10:24 IST)
Updated Date: Tue, 03 Apr 2018 (10:30 IST)
ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಮತ್ತು ಸ್ನೂಕರ್ ಪಂಕಜ್ ಅಡ್ವಾಣಿಗೆ ನಿನ್ನೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದರು. ಈ ವೇಳೆ ಧೋನಿ ನಡೆದುಕೊಂಡ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಕ್ರಿಕೆಟಿಗ ಧೋನಿಗೆ ಸೇನೆಯ ಮೇಲೆ ಎಲ್ಲಿಲ್ಲದ ಗೌರವ. ಸೇನೆಯ ಗೌರವ ಸದಸ್ಯರೂ ಆಗಿರುವ ಧೋನಿ ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಲು ಪಕ್ಕಾ ಯೋಧನಂತೆ ಸೇನಾ ಸಮವಸ್ತ್ರದಲ್ಲಿ ತೆರಳಿದ್ದು ಮಾತ್ರವಲ್ಲದೆ, ವೀರ ಯೋಧನಂತೆ ನಡೆಯುತ್ತಾ ಪ್ರಶಸ್ತಿ ಸ್ವೀಕರಿಸಿದರು.
ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಪತ್ನಿ ಸಾಕ್ಷಿ ಸಿಂಗ್ ಪತಿಯ ನಡಿಗೆ ನೋಡಿ ನಗು ನಗುತ್ತಲೇ ಮೆಚ್ಚುಗೆಯಿಂದ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದು ವಿಶೇಷವಾಗಿತ್ತು. ಧೋನಿಯ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆಗೆ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ