Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾದ ಸಹ ಆಟಗಾರನಿಂದಲೇ ಕೊಹ್ಲಿ, ಧೋನಿಗೆ ಸವಾಲು!

ವಿರಾಟ್ ಕೊಹ್ಲಿ
ನವದೆಹಲಿ: ಈ ಬಾರಿ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಮತ್ತು ಧೋನಿ ವಿಕೆಟ್ ಬುಟ್ಟಿಗೆ ಹಾಕಿಕೊಳ್ಳುವುದೇ ತನ್ನ ಗುರಿ ಎಂದು ಟೀಂ ಇಂಡಿಯಾ ಸ್ಪಿನ್ನರ್ ಕುಲದೀಪ್ ಯಾದವ್ ಹೇಳಿಕೊಂಡಿದ್ದಾರೆ.

ಕುಲದೀಪ್ ಯಾದವ್ ಐಪಿಎಲ್ ನಲ್ಲಿ ಈ ಬಾರಿ ಕೋಲ್ಕೊತ್ತಾ ನೈಟ್ ರೈಡರ್ಸ್ ಪರ ಆಡಲಿದ್ದಾರೆ. ಹೀಗಾಗಿ ಚೆನ್ನೈ ಮತ್ತು ಬೆಂಗಳೂರು ಎದುರು ಆಡುವಾಗ ಕೊಹ್ಲಿ, ಧೋನಿ ವಿಕೆಟ್ ಪಡೆಯುವುದೇ ತನ್ನ ಗುರಿಯಾಗಿರುತ್ತದೆ ಎಂದು ಕುಲದೀಪ್ ಹೇಳಿಕೊಂಡಿದ್ದಾರೆ.

‘ಕೆಲವೊಮ್ಮೆ ನೀವು ಇಂತಹ ಆಟಗಾರರ ಜತೆ ಒಂದೇ ತಂಡದಲ್ಲಿ ಪ್ರತಿನಿಧಿಸಬೇಕೆಂದು ಬಯಸುವಿರಿ. ಆದರೆ ನನಗೆ ಇಂತಹ ಶ್ರೇಷ್ಠ ಕ್ರಿಕೆಟಿಗರಿಗೆ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಬಾಲ್ ಮಾಡಬೇಕೆಂಬುದು ದೊಡ್ಡ ಗೌರವ ಎನಿಸುತ್ತದೆ.  ಅವರಿಬ್ಬರನ್ನೂ ಔಟ್ ಮಾಡಿ ವಿಕೆಟ್ ನನ್ನ ಬುಟ್ಟಿಗೆ ಹಾಕಿಕೊಳ್ಳಬೇಕೆಂಬ ಬಯಕೆಯಿದೆ’ ಎಂದು ಯುವ ಸ್ಪಿನ್ನರ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಳಂಕಿತ ಸ್ಟೀವ್ ಸ್ಮಿತ್ ಕ್ರಿಕೆಟ್ ಕಿಟ್ ಕಸದ ಬುಟ್ಟಿಗೆ ಹಾಕಿದ ತಂದೆ!