Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಯ ಹೊಸ ಲವ್ ಬಹಿರಂಗ!

ವಿರಾಟ್ ಕೊಹ್ಲಿಯ ಹೊಸ ಲವ್ ಬಹಿರಂಗ!
ಮುಂಬೈ , ಶನಿವಾರ, 31 ಮಾರ್ಚ್ 2018 (07:43 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೈ ಹಿಡಿದ ಮೇಲೆ ಜಾಹೀರಾತಿನಲ್ಲೂ ಬೇರೆ ಹುಡುಗಿಯರ ಜತೆ ಕಾಣಿಸಿಕೊಳ್ಳಲ್ಲ ಎನ್ನುವಷ್ಟು ಶ್ರೀರಾಮಚಂದ್ರನಂತಾಗಿದ್ದಾರೆ. ಹಾಗಿರುವಾಗ ಇದ್ಯಾವ ಹೊಸ ಲವ್ ವಿಚಾರವಿರಬಹುದು ಎಂಬ ಕುತೂಹಲ ನಿಮಗಿರಬಹುದು.

ಕೊಹ್ಲಿಗೆ ಲವ್ ಹುಟ್ಟಿಕೊಂಡಿರುವುದು ಹುಡುಗಿಯರ ಮೇಲಲ್ಲ. ಕೊಹ್ಲಿ ಲವ್ ಇರುವುದು ಕಾರುಗಳ ಮೇಲೆ. ಆಡಿ ಕಂಪನಿಯ ವಿವಿಧ ಕಾರುಗಳ ಸಂಗ್ರಹವನ್ನೇ ಹೊಂದಿರುವ ವಿರಾಟ್, ಇದೀಗ ಆ ಲಿಸ್ಟ್ ಗೆ ಹೊಸದೊಂದು ಕಾರು ಸೇರ್ಪಡೆಗೊಳಿಸಿದ್ದಾರೆ.

ವಿರಾಟ್ ಮನೆಗೆ ಈಗ ಕಾಂಟಿನೆಂಟಲ್ ಜಿಟಿ ಕಾರ್ ಆಗಮನವಾಗಿದೆ. ಈ ಕಾರ್ ಹೊಂದುವುದು ವಿರಾಟ್ ಕನಸಾಗಿತ್ತಂತೆ. ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್ ರಂತಹ ಕೆಲವರಲ್ಲಿ ಮಾತ್ರ ಈ ಕಾರ್ ಇದೆ. ಇದೀಗ ವಿರಾಟ್ ಮನೆಗೂ ಬಂದಿದೆ. ತಮ್ಮ ಸಹೋದರ ವಿಕಾಸ್ ಕೊಹ್ಲಿ ಹೆಸರಲ್ಲಿ ಕೊಹ್ಲಿ ಈ ಕಾರ್ ಖರೀದಿಸಿದ್ದಾರೆ.ಈ ಕಾರಿನ ಬೆಲೆ ಅಂದಾಜು ಮೂರೂವರೆ ಕೋಟಿ ರೂ. ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸ್ಟೀವ್ ಸ್ಮಿತ್, ವಾರ್ನರ್ ಈ ಮೊದಲೂ ಬಾಲ್ ಟೆಂಪರಿಂಗ್ ಮಾಡಿದ್ದರಂತೆ! ಮತ್ತೊಂದು ಮಾಹಿತಿ ಸ್ಪೋಟ!