Publish Date: Sat, 31 Mar 2018 (05:13 IST)
Updated Date: Sat, 31 Mar 2018 (05:16 IST)
ಬೆಂಗಳೂರು : ನಟಿ ಭಾವನಾ ಅವರು ಭಾಗವಹಿಸಿದ ಕಾರ್ಯಕ್ರಮವೊಂದರಲ್ಲಿ ಅಜಾನ್ ಗಾಗಿ ಭಾಷಣ ನಿಲ್ಲಿಸಿದ್ದಕ್ಕೆ ಕೋಪಗೊಂಡು ವೇದಿಕೆ ಬಿಟ್ಟು ಹೊರನಡೆದ ಘಟನೆ ಇತ್ತಿಚೆಗೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಯುವ ಕಾಂಗ್ರೆಸ್ ಕಾರ್ಯಕ್ರಮವೊಂದರಲ್ಲಿ ನಟಿ ಭಾವನಾ ಅವರು ಪಾಲ್ಗೊಂಡಿದ್ದರು. ಆ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸದಸ್ಯರೊಬ್ಬರು ಭಾಷಣ ಮಾಡುವಾಗ ಅಜಾನ್ ಕೇಳಿ ಬಂದಿದ್ದರಿಂದ ಭಾಷಣವನ್ನು ನಿಲ್ಲಿಸಿ ಗೌರವ ಸಲ್ಲಿಸಿದ್ದರು. ಇದಕ್ಕೆ ಕೋಪಗೊಂಡ ನಟಿ ಭಾವನಾ ಅವರು ವೇದಿಕೆಯಿಂದ ಎದ್ದು ಹೊರಗೆ ನಡೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಟಿ ವಿರುದ್ದ ಆರೋಪ ಕೇಳಿಬಂದಿದೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಟಿದ ಭಾವನಾ ಅವರು,’ ನನಗೆ ಎಲ್ಲ ಧರ್ಮ ಮತ್ತು ಜಾತಿ ಮೇಲೆ ಗೌರವವಿದೆ. ಅದು ಕೇವಲ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾಗಿತ್ತೇ ಹೊರತು ಯಾವುದೇ ಧರ್ಮದ ವೇದಿಕೆಯಾಗಿರಲಿಲ್ಲ. ಧರ್ಮದ ಮೇಲಿನ ಭಕ್ತಿ ಮನಸ್ಸಿನಲ್ಲಿರಬೇಕು’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ