Publish Date: Thu, 29 Mar 2018 (05:48 IST)
Updated Date: Thu, 29 Mar 2018 (05:50 IST)
ಮುಂಬೈ : ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವುದು ಈಗ ಒಂದು ಚಟವಾಗಿದ್ದು, ಇದಕ್ಕೆ ಹೆಚ್ಚು ಗುರಿಯಾಗುತ್ತಿರುವವರು ಸಿನಿಮಾ ತಾರೆಯರು. ಇತ್ತೀಚೆಗೆ ಟ್ರೋಲ್ ಮಾಡುವವರ ಬಾಯಿಗೆ ಬಾಲಿವುಡ್ ನಟಿ ಜೀರೋ ಸೈಜ್ ಎನಿಸಿಕೊಂಡಿರುವ ಕರೀನಾ ಕಪೂರ್ ಅವರು ಕೂಡ ತುತ್ತಾಗಿದ್ದಾರೆ.
ಹೌದು. ತಾಯಿ ಆದ ಮೇಲೆ ದಪ್ಪವಾಗಿದ್ದ ಕರೀನಾ ಅವರು ಡಯಟ್ ಮಾಡುವುದರ ಮೂಲಕ ಈಗ ಮತ್ತೆ ಜೀರೋ ಸೈಜ್ ಗೆ ಬಂದಿದ್ದಾರೆ. ಈ ವಿಚಾರದಿಂದಾಗಿ ಈಗ ಅವರು ಟ್ರೋಲ್ ಗೆ ಗುರಿಯಾಗಿದ್ದಾರೆ. ಸಿಂಗಾಪೂರ್ ದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ನೆಚ್ಚಿನ ವಿನ್ಯಾಸಕಾರ ಮನೀಶ್ ಮಲ್ಹೋತ್ರ ಅವರೊಂದಿಗೆ ರ್ಯಾಂಪ್ ವಾಕ್ ಮಾಡಿದ್ದರು. ಈ ಫೋಟೋ ನೋಡಿದ ಕೆಲವು ನೆಟ್ಟಿಗರು ''ಒಳ್ಳೆ ಅಸ್ಥಿಪಂಜರ ರೀತಿ ಕಾಣ್ತಿದ್ದೀರಾ. ದಯವಿಟ್ಟು ತಿನ್ನೋದಕ್ಕೆ ಶುರು ಮಾಡಿ'' ಎಂದು ಕಾಮೆಂಟ್ ಮಾಡ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ