Select Your Language

Notifications

webdunia
webdunia
webdunia
webdunia

ತಮ್ಮ ಚಿತ್ರವೊಂದನ್ನು ಬಿಡುಗಡೆ ಮಾಡಬೇಕೆಂದು ಅಮಿತಾಬ್ ಬಚ್ಚನ್ ಬೇಡಿಕೊಂಡಿದ್ದು ಯಾಕೆ…?

ತಮ್ಮ ಚಿತ್ರವೊಂದನ್ನು ಬಿಡುಗಡೆ ಮಾಡಬೇಕೆಂದು ಅಮಿತಾಬ್  ಬಚ್ಚನ್ ಬೇಡಿಕೊಂಡಿದ್ದು ಯಾಕೆ…?
ಮುಂಬೈ , ಬುಧವಾರ, 28 ಮಾರ್ಚ್ 2018 (05:55 IST)
ಮುಂಬೈ : ಬಾಲಿವುಡ್ ಚಿತ್ರರಂಗದಲ್ಲಿ ತಮ್ಮ ಅಮೊಘ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದನೆ ಮಾಡಿ ಸ್ಟಾರ್ ನಟರೆಂದು ಹೆಸರು ಗಳಿಸಿರುವ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಇದೀಗ ತಾವು ನಟಿಸಿದ ಚಿತ್ರವೊಂದನ್ನು ಬಿಡುಗಡೆ ಮಾಡಬೇಕೆಂದು ಬೇಡಿಕೊಳ್ಳುತ್ತಿದ್ದಾರೆ ಎಂದರೆ ನಂಬಲು ಅಸಾಧ್ಯ.


ಆದರೆ ಇದು ನಿಜ. ಶೂಜಿತ್ ಸರ್ಕಾರ್ ನಿರ್ದೇಶನದಲ್ಲಿ ಮೂಡಿಬಂದ ‘ಶೂಬೈಟ್’ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಅವರ ಜೊತೆಗೆ ಸಾರಿಕಾ, ದಿಯಾ ಮಿರ್ಜಾ, ನವಾಜುದ್ದೀನ್ ಸಿದ್ದಿಕಿ  ಮುಂತಾದವರು ನಟಿಸಿದ್ದರು. ನಿರ್ಮಾಪಕರ ಕಾನೂನು ಹೋರಾಟದಿಂದಾಗಿ ಈ ಚಿತ್ರ ಬಿಡುಗಡೆಯಾಗಿಲ್ಲ.


ಈ ಬಗ್ಗೆ ಟ್ವೀಟ್ ಮಾಡಿದ್ದ ಅಮಿತಾಬ್ ಬಚ್ಚನ್ ಅವರು,’ ಹೌದು. ಯುಟಿವಿ ಹಾಗೂ ಡಿಸ್ನಿ ಆಂತರಿಕ ಚರ್ಚೆ, ಸಮಸ್ಯೆ ಅಥವಾ ವೈಯಕ್ತಿಕ ವಾದಗಳನ್ನು ಬದಿಗಿಟ್ಟು , ಶೂಜಿತ್ ಸರ್ಕಾರ್ ಅವರ ವಿನೂತನ ಕಥಾನಕ ಮತ್ತು ಚಿತ್ರವನ್ನು ಇತರರು ಆಸ್ವಾದಿಸಲು ಅವಕಾಶ ಮಾಡಿಕೊಡಬೇಕು. ದಯವಿಟ್ಟು’ ಎಂದು ಬೇಡಿಕೊಂಡಿದ್ದಾರೆ. ನಂತರ ಚಿತ್ರದ ಎರಡು ಪೋಸ್ಟರ್ ಗಳನ್ನು ಶೇರ್ ಮಾಡಿ ಆ ಮೂಲಕ ಚಿತ್ರವನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ನಿರ್ದೇಶಕ ಶೂಜಿತ್ ಸರ್ಕಾರ್  ಅವರು ಕೂಡ ಬೆಂಬಲಿಸಿದ್ದಾರೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯಕ್ಕೆ ಬರುವುದರ ಬಗ್ಗೆ ನಟ ಶಿವರಾಜ್ ಕುಮಾರ್ ಹೇಳಿದ್ದೇನು...?