Publish Date: Tue, 27 Mar 2018 (06:57 IST)
Updated Date: Tue, 27 Mar 2018 (07:00 IST)
ಮುಂಬೈ : ಬಾಲಿವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಟ ರಣಬೀರ್ ಕಪೂರ್ ಅವರು ಸದ್ಯದಲ್ಲೆ ಜೈಲು ವಾಸ ಅನುಭವಿಸಲಿದ್ದಾರಂತೆ.
ಅಂದ ಮಾತ್ರಕ್ಕೆ ಅವರು ಯಾವುದೋ ತಪ್ಪು ಮಾಡಿ ಜೈಲು ಸೇರುತ್ತಿಲ್ಲ. ನಟ ರಣಬೀರ್ ಕಪೂರ್ ಅವರು ನಿರ್ದೇಶಕ ರಾಜ್ ಕುಮಾರ್ ಹಿರಾನಿ ಅವರು ನಿರ್ದೇಶಿಸುತ್ತಿರುವ ಬಾಲಿವುಡ್ ನಟ ಸಂಜಯ್ ದತ್ ಅವರ ಜೀವನ ಚರಿತ್ರೆ ಕುರಿತಾದ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಹಿಂದೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದಕ್ಕಾಗಿ ನಟ ಸಂಜಯ್ ದತ್ ಅವರು ಜೈಲು ಶಿಕ್ಷೆ ಅನುಭವಿಸಿದ್ದರು. ಆ ಕಾರಣದಿಂದ ಮುಂದಿನ ಹಂತದ ಶೂಟಿಂಗ್ ಗಾಗಿ ರಣಬೀರ್ ಅವರು ಜೈಲು ವಾಸದ ಅನುಭವಪಡೆಯಲು ಒಂದು ವಾರ ಬೋಪಾಲ್ ಜೈಲಿನ ಖೈದಿಗಳೊಂದಿಗೆ ಕಳೆಯಲು ನಿರ್ಧರಿಸಿದ್ದಾರೆ. ಇದರಿಂದ ಪಾತ್ರದಲ್ಲಿ ತಲ್ಲೀನತೆ ಹಾಗೂ ನೈಜ್ಯತೆ ಕಾಣಲು ಸಾಧ್ಯ ಎಂಬುದು ರಣಬೀರ್ ಅವರ ಅಭಿಪ್ರಾಯ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ