Select Your Language

Notifications

webdunia
webdunia
webdunia
webdunia

ಅಬ್ಬಾ! ನಟಿ ಕರೀನಾ ಜಿಮ್ ವರ್ಕೌಟ್ ಗಾಗಿ ಇಷ್ಟೊಂದು ಬೆಲೆಯ ಟೀ ಶರ್ಟ್ ಧರಿಸಿದ್ರಾ?

ಅಬ್ಬಾ! ನಟಿ ಕರೀನಾ ಜಿಮ್ ವರ್ಕೌಟ್ ಗಾಗಿ ಇಷ್ಟೊಂದು ಬೆಲೆಯ ಟೀ ಶರ್ಟ್ ಧರಿಸಿದ್ರಾ?
ಮುಂಬೈ , ಭಾನುವಾರ, 25 ಮಾರ್ಚ್ 2018 (06:01 IST)
ಮುಂಬೈ : ಸಿನಿಮಾ ತಾರೆಯರು ಏನೇ ಮಾಡಿದ್ರು ಅದು ಬಹುಬೇಗನೆ ಸುದ್ದಿಯಾಗಿಬಿಡುತ್ತದೆ. ಹಾಗೇ ಇದೀಗ ಬಾಲಿವುಡ್ ನಟಿ ಕರೀನಾ ಕಪೂರ್ ಅವರು ಜಿಮ್ ನಲ್ಲಿ ವರ್ಕೌಟ್ ಮಾಡಲು ಧರಿಸುವ ಟೀ ಶರ್ಟ್ ಬಗ್ಗೆ ಈಗ ಸುದ್ದಿಯಾಗಿದೆ.


ಹೌದು. ನಟಿ ಕರೀನಾ ಕಪೂರ್ ಅವರು ಇತ್ತೀಚೆಗೆ ಜಿಮ್ ನಿಂದ ವರ್ಕೌಟ್ ಮಾಡಿ ಹೊರಬರುತ್ತಿರುವಾಗ ತೆಗೆದ ಫೋಟೋವೊಂದು ಈಗ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಆ ಫೋಟೋದಲ್ಲಿ ಕರೀನಾ ಅವರು ಬ್ಲಾಕ್ ಲೆಗ್ಗಿನ್ಸ್ ಮತ್ತು ಎಸಿ ಡಿಸಿ ಫಿಟ್ ಜಿಮ್ ಟಿ ಶರ್ಟ್ ಧರಿಸಿದ್ದು, ಆ ಟೀ ಶರ್ಟ್ ಬೆಲೆ ಕೇಳಿದರೆ ಎಂತವರಿಗಾದರೂ ಆಶ್ಚರ್ಯ ಆಗೇಆಗುತ್ತದೆ.


ಏಕೆಂದರೆ ಅವರು ಧರಿಸಿದ್ದ ಆ ಟೀ ಶರ್ಟ್ ನ ಬೆಲೆ ಒಂದು ಸಾವಿರವಲ್ಲ, 5 ಸಾವಿರವಲ್ಲ ಬರೋಬರಿ 45 ಸಾವಿರವಂತೆ.
ಈ ಟೀ ಶರ್ಟ್ ಅನ್ನು ಪ್ರಖ್ಯಾತ ಫ್ಯಾಷನ್ ಡಿಸೈನರ್ ಗಳು ತಯಾರಿಸಿದ್ದು, ಬೇಸಿಗೆಯಲ್ಲಿ ಅನುಕೂಲವಾಗುವಂತೆ ಅದನ್ನು ತಯಾರಿಸಲಾಗಿದೆಯಂತೆ. ಇದರ ರೇಟ್ ಮಾರ್ಕೆಟ್ ನಲ್ಲಿ 45 ಸಾವಿರ ರೂ. ಎಂಬುದಾಗಿ  ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಂಗಿತರಂಗ ಗುಂಗಲ್ಲಿ ಹೋದವರಿಗೆ ನಿರಾಸೆ ಮಾಡಿದರಾ ರಾಜರಥ ಅನೂಪ್ ಭಂಡಾರಿ?!