Select Your Language

Notifications

webdunia
webdunia
webdunia
webdunia

'ಬಾಘಿ-2' ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಡ್ಯಾನ್ಸ್ ಮಾಡಿದ ಹಾಡಿನ ಬಗ್ಗೆ ಮಾಧುರಿ ದೀಕ್ಷಿತ್ ಅಭಿಮಾನಿಗಳಿಗೇಕೆ ಬೇಸರ

'ಬಾಘಿ-2' ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಡ್ಯಾನ್ಸ್ ಮಾಡಿದ ಹಾಡಿನ ಬಗ್ಗೆ ಮಾಧುರಿ ದೀಕ್ಷಿತ್ ಅಭಿಮಾನಿಗಳಿಗೇಕೆ ಬೇಸರ
ಮುಂಬೈ , ಶುಕ್ರವಾರ, 23 ಮಾರ್ಚ್ 2018 (07:00 IST)
ಮುಂಬೈ : ಬಾಲಿವುಡ್ ನ 'ಬಾಘಿ-2' ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಅಭಿನಯದ 'ತೇಜಾಬ್' ಸಿನಿಮಾದ ಹಾಡೊಂದನ್ನು ರೀ ಕ್ರಿಯೇಟ್ ಮಾಡಲಾಗಿದ್ದು, ಆದರೆ ಇದೀಗ ಈ ಹಾಡನ್ನು ವೀಕ್ಷಿಸಿದ ಮಾಧುರಿ ದೀಕ್ಷಿತ್ ಅವರ  ಅಭಿಮಾನಿಗಳು ಆ ಹಾಡಿನ ಕುರಿತು ಬೇಸರವನ್ನು ವ್ಯಕ್ತಪಡಿಸಿದ್ದಾರೆ.


ಸಾಜಿದ್ ನಡಿಯಾದ್ವಾಲಾ ಅವರ ನಿರ್ಮಾಣದಲ್ಲಿ, ಅಹ್ಮದ್ ಖಾನ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಬಾಘಿ-2' ಚಿತ್ರದಲ್ಲಿ ಟೈಗರ್ ಶ್ರಾಫ್, ಹಾಗು ದಿಶಾ ಪಠಾನಿ ಅವರು ಜೋಡಿಯಾಗಿ ನಟಿಸುತ್ತಿದ್ದು, ಈ ಸಿನಿಮಾ ಬಗ್ಗೆ ಯುವಜನತೆಯನ್ನು ಆಕರ್ಷಿಸಲು ಮಾಧುರಿ ದೀಕ್ಷಿತ್ ಅಭಿನಯದ 'ತೇಜಾಬ್' ಸಿನಿಮಾದ ಸೂಪರ್ ಹಿಟ್ 'ಏಕ್ ದೋ ತೀನ್'  ಹಾಡನ್ನು ರೀ ಕ್ರಿಯೇಟ್ ಮಾಡಲಾಗಿತ್ತು. ಇದರಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಮಾಧುರಿ ಧರಿಸಿದ್ದ ಕಾಸ್ಟ್ಯೂಮ್ ಧರಿಸಿ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದರು.


ಆದರೆ ಈ ಹಾಡನ್ನು ಟ್ರೈಲರ್ ನಲ್ಲಿ ವೀಕ್ಷಿಸಿದ ಮಾಧುರಿ ಅಭಿಮಾನಿಗಳು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ರೀ ಕ್ರಿಯೇಟ್ ಮಾಡಿದ ಈ ಹಾಡಿನಲ್ಲಿ ಮಧ್ಯೆ ಮಧ್ಯೆ ಸೀಟಿ ಸೇರಿಸಿ ಅಶ್ಲೀಲತೆಯನ್ನು ಪ್ರದರ್ಶಿಸಲಾಗಿದೆ. ಇದು ಮಾಧುರಿ ದೀಕ್ಷಿತ್ ಅವರಿಗೆ ಮಾಡಿರುವ ಅಪಮಾನ ಎಂದು ಅವರ ಅಭಿಮಾನಿಗಳು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟ ಕುಣಾಲ್ ಖೇಮು ಬೈಕ್ ಓಡಿಸೋದು ಇಷ್ಟ ಎಂದು ಮಾಡಿಕೊಂಡ ಎಡವಟ್ಟಾದರೂ ಏನು…?