Select Your Language

Notifications

webdunia
webdunia
webdunia
webdunia

ಪುನೀತ್ ರಾಜ್ ಕುಮಾರ್ ಅಭಿನಯದ ‘ನಟ ಸಾರ್ವಭೌಮ’ ಟೈಟಲ್ ಗೆ ವಿರೋಧ ವ್ಯಕ್ತಪಡಿಸಿದ್ದು ಯಾರು?

ಪುನೀತ್ ರಾಜ್ ಕುಮಾರ್ ಅಭಿನಯದ ‘ನಟ ಸಾರ್ವಭೌಮ’ ಟೈಟಲ್ ಗೆ ವಿರೋಧ ವ್ಯಕ್ತಪಡಿಸಿದ್ದು ಯಾರು?
ಬೆಂಗಳೂರು , ಶನಿವಾರ, 17 ಮಾರ್ಚ್ 2018 (06:00 IST)
ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸಲಿರುವ ಹೊಸ ಸಿನಿಮಾಕ್ಕೆ ‘ನಟ ಸಾರ್ವಭೌಮ’ ಎಂದು ಟೈಟಲ್ ಇಟ್ಟಿದ್ದು, ಇದಕ್ಕೆ ಈಗ ಸಾಮಾಜಿಕ ತಾಣಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ.


ಕನ್ನಡ ಚಿತ್ರರಸಿಕರ ಮನಗೆದ್ದ ಡಾ.ರಾಜ್ ಕುಮಾರ್ ಅವರ ಅಭಿನಯಕ್ಕೆ ಮೆಚ್ಚಿ ಅವರನ್ನು ನಟ ಸಾರ್ವಭೌಮ ಎಂಬ ಹೆಸರಿನಿಂದ ಕರೆಯುತ್ತಿದ್ದು, ಇದೀಗ ಅದೇ ಹೆಸರನ್ನು ಅವರ ಮಗನಾದ ಪುನೀತ್ ಅವರ ಹೊಸ ಸಿನಿಮಾಕ್ಕೆ ಟೈಟಲ್ ಆಗಿ ಬಳಸಿಕೊಂಡಿದ್ದರು. ಆದರೆ ಈ ಟೈಟಲ್ ರಾಜ್ ಕುಮಾರ್ ಅಭಿಮಾನಿಗಳಾದ ಕೆಲವರಿಗೆ ಖುಷಿ ನೀಡಿದರೆ ಇನ್ನೂ ಕೆಲವರು ಆಕ್ಷೇಪ ಮಾಡಿದ್ದಾರೆ. ಈ ಟೈಟಲ್ ಕೇವಲ ಡಾ ರಾಜ್ ಕುಮಾರ್ ಅವರಿಗೆ ಮಾತ್ರ ಸೂಕ್ತವಾದದು. ಈ ಟೈಟಲ್ ನ ಮತ್ತೆ ಬಳಸುವುದು ಅಷ್ಟೊಂದು ಸಮಂಜಸವಾಗಿಲ್ಲ. ರಾಜ್ ಕುಮಾರ್ ಅವರ ಅಭಿನಯಕ್ಕೆ ಈ ಹೆಸರು ಬಂದಿರುವುದು, ಆದರೆ ಅವರ ಮಗ ಪುನೀತ್ ಅವರು ಇನ್ನೂ ಅವರ ಮಟ್ಟಕ್ಕೆ ಬೆಳೆದಿಲ್ಲ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.


ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ, ಪವನ್ ಒಡೆಯರ್ ನಿರ್ದೇಶನದಲ್ಲಿ ‘ನಟ ಸಾರ್ವಭೌಮ’ ಚಿತ್ರ ಮೂಡಿಬರಲಿದ್ದು, ರಚಿತಾ ರಾಮ್ ಅವರು ಪುನೀತ್ ಅವರಿಗೆ ಜೋಡಿಯಾಗಿ ನಟಿಸಲಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ತೆರೆಕಾಣುತ್ತಿರುವ ‘ನನಗಿಷ್ಟ’ ಚಿತ್ರದ ನಾಯಕಿ ಮಾತ್ರ ಬದುಕಿಲ್ಲ. ಯಾರು ಗೊತ್ತಾ ಆಕೆ?