Publish Date: Sun, 11 Mar 2018 (06:44 IST)
Updated Date: Sun, 11 Mar 2018 (06:47 IST)
ಮೈಸೂರು : ಸಾಮಾನ್ಯ ಜನರು ಮೈಸೂರು ಚಾಮುಂಡಿ ಬೆಟ್ಟದ ಸಾವಿರ ಮೆಟ್ಟಿಲನ್ನು ಹತ್ತಲು ಹಿಂದೆಟ್ಟು ಹಾಕುತ್ತಾರೆ. ಅಂತಹದರಲ್ಲಿ ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬರಿಗಾಲಲ್ಲೇ ಸಾವಿರ ಮೆಟ್ಟಿಲನ್ನು ಹತ್ತಿ ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸಿದ್ದಾರೆ.
ಶನಿವಾರದಂದು ನಗರದ ಮಹಿಳಾ ಪುರ್ನವಸತಿ ಶಕ್ತಿಧಾಮದಲ್ಲಿ ಆಯೋಜಿಸಿದ ಕಾರ್ಯಕ್ರಮಕ್ಕೆ ಪುನೀತ್ ರಾಜ್‍ಕುಮಾರ್ ಭೇಟಿ ನೀಡಿದ್ದು ಕಾರ್ಯಕ್ರಮ ಮುಗಿದ ನಂತ ಅವರು ಬರಿಗಾಲಲ್ಲಿ ಚಾಮುಂಡಿ ಬೆಟ್ಟದ ಸಾವಿರ ಮೆಟ್ಟಿಲು ಹತ್ತಿ ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸಿದ್ದಾರೆ. ಅವರ ಅಭಿಮಾನಿಗಳು ಬೆಟ್ಟ ಹತ್ತಿ ಇಳಿಯುವವರೆಗೂ ಅವರ ಜೊತೆಗಿದ್ದು ಸಹಕರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ