Select Your Language

Notifications

webdunia
webdunia
webdunia
webdunia

ಸಾಹಸಸಿಂಹ ವಿಷ್ಣುವರ್ಧನ್ ಗೆ ಕಿಚ್ಚ ಸುದೀಪ್ ನಿರ್ದೇಶನ!

ಸಾಹಸಸಿಂಹ ವಿಷ್ಣುವರ್ಧನ್ ಗೆ ಕಿಚ್ಚ ಸುದೀಪ್ ನಿರ್ದೇಶನ!
ಬೆಂಗಳೂರು , ಶನಿವಾರ, 17 ಮಾರ್ಚ್ 2018 (09:19 IST)
ಬೆಂಗಳೂರು: ಇದು ನಿಜವಾಗಲು ಸಾಧ್ಯವೇ? ಅಂತ ನೀವು ಕೇಳಬಹುದು. ಸಾಹಸಸಿಂಹ ವಿಷ್ಣುವರ್ಧನ್ ನಮ್ಮನ್ನೆಲ್ಲಾ ಅಗಲಿ ಎಷ್ಟೋ ದಿನಗಳಾಗಿವೆ. ಆದರೆ ಈಗ ಹೇಗೆ ಕಿಚ್ಚ ವಿಷ್ಣುದಾದಾಗೆ ನಿರ್ದೇಶನ ಮಾಡಲು ಸಾಧ್ಯ?

ನಿಜ ಜೀವನದಲ್ಲಿ ಇದು ಸಾಧ್ಯವಿಲ್ಲದೇ ಇರಬಹುದು. ಆದರೆ ಕನಸಿನಲ್ಲಿ ಸಾಧ್ಯ. ಅಂತಹದ್ದೊಂದು ಕನಸು ಬಿದ್ದಿರುವುದು ನಟಿ ಅನುಪ್ರಭಾಕರ್ ಗೆ. ಶಾಂತಿ ನಿವಾಸ ಸಿನಿಮಾದಲ್ಲಿ ಇವರು ಒಟ್ಟಿಗೇ ನಟಿಸಿದ್ದರು. ಕಿಚ್ಚ ಸುದೀಪ್ ಈ ಸಿನಿಮಾವನ್ನು ನಿರ್ದೇಶಿಸಿದ್ದರು.

ಇದೀಗ ಮತ್ತೆ ಅನುಪ್ರಭಾಕರ್ ಗೆ ಹಾಗೊಂದು ಕನಸು ಬಿದ್ದಿದೆಯಂತೆ. ಅದನ್ನು ಕಿಚ್ಚನಿಗೆ ಟ್ವಿಟರ್ ಮೂಲಕ ಹೇಳಿಕೊಂಡಿದ್ದಾರೆ. ಈವತ್ತು ಬೆಳ್ಳಂ ಬೆಳಿಗ್ಗೆ ಒಂದು ಅದ್ಭುತ ಕನಸು ಕಂಡೆ. ಆ ಕನಸಿನಲ್ಲಿ ನೀವು ವಿಷ್ಣು ಸರ್ ಮತ್ತು ನನ್ನ ದೃಶ್ಯಕ್ಕೆ ನಿರ್ದೇಶನ ಮಾಡುತ್ತಿದ್ದಿರಿ. ಇದೊಂದೇ ಕನಸಿನಿಂದಾಗಿ ನಗು ನಗುತ್ತಲೇ ದಿನ ಆರಂಭಿಸಿದೆ ಎಂದು ಅನುಪ್ರಭಾಕ್ ಟ್ವೀಟ್ ಮಾಡಿದ್ದರು.

ಇದಕ್ಕೆ ಉತ್ತರಿಸಿದ ಕಿಚ್ಚ ಸುದೀಪ್, ಶಾಂತಿ ನಿವಾಸ ಸಿನಿಮಾದಲ್ಲಿ ಆ ಕನಸು ನನಸಾಗಿತ್ತು. ನಿಮ್ಮನ್ನು ಡೈರೆಕ್ಟ್ ಮಾಡೋದು ನಿಜಕ್ಕೂ ಅದ್ಭುತ ಅನುಭವ ಎಂದಿದ್ದಾರೆ. ಬೆಳಗಿನ ಕನಸು ಈ ವಿಚಾರದಲ್ಲಿ ನನಸಾಗೋದು ಸಾಧ್ಯವಿಲ್ಲ ಬಿಡಿ!

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ            

Share this Story:

Follow Webdunia kannada

ಮುಂದಿನ ಸುದ್ದಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ