Select Your Language

Notifications

webdunia
webdunia
webdunia
webdunia

ರಾಜಕಾರಣದಲ್ಲಿ ಆಸಕ್ತಿಯೂ ಇಲ್ಲ. ನನ್ನ ಆಸಕ್ತಿ ಏನಿದ್ರೂ ಜನರ ಜೊತೆ ಬೆರೆಯುವುದು ಅಷ್ಟೇ- ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

ರಾಜಕಾರಣದಲ್ಲಿ ಆಸಕ್ತಿಯೂ ಇಲ್ಲ. ನನ್ನ ಆಸಕ್ತಿ ಏನಿದ್ರೂ ಜನರ ಜೊತೆ ಬೆರೆಯುವುದು ಅಷ್ಟೇ- ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಮಡಿಕೇರಿ , ಗುರುವಾರ, 29 ಮಾರ್ಚ್ 2018 (05:31 IST)
ಮಡಿಕೇರಿ : ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ಕಿಡಿಕಾರಿದ್ದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಎಲ್ಲಾ ಕಡೆ ಹರಿದಾಡಿತ್ತು. ಆದರೆ ಇದೀಗ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು,’ನಾನು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರುವುದಿಲ್ಲ. ಯಾವುದೇ ಪಕ್ಷದ ಪ್ರಚಾರ ಕಾರ್ಯದಲ್ಲೂ ತೊಡಗಿಸಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಈ ವದಂತಿಗೆ ತೆರೆ ಎಳೆದಿದ್ದಾರೆ.


ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪದಲ್ಲಿರುವ ಕಾವೇರಿ ಕಾಲೇಜು ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತನ್ನ ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಸಮಾಜ ಸೇವೆಗಳಲ್ಲೇ ತನ್ನನ್ನು ತಾನು ತೊಡಗಿಸಿಕೊಳ್ಳುತ್ತೇನೆ ವಿನಃ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿದರು.


ಇದೇ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಭೇಟಿ ಕುರಿತು ಮಾತನಾಡಿದ ಅವರು, ಮಾರ್ಚ್ 30 ರಂದು ಅಮಿತ್ ಷಾ ಮೈಸೂರು ಅರಮನೆಗೆ ಭೇಟಿ ನೀಡುವ ಬಗ್ಗೆ ನನಗೆ ತಿಳಿದಿಲ್ಲ. ನನ್ನ ಗಮನಕ್ಕೂ ಇಲ್ಲಿವರೆಗೂ ಬಂದಿರಲಿಲ್ಲ, ನಿಮ್ಮಿಂದಲೇ ಗೊತ್ತಾಗ್ತಿದೆ. ಒಂದು ವೇಳೆ ಅಮಿತ್ ಶಾ ಅರಮನೆಗೆ ಬಂದ್ರೆ ಭೇಟಿ ಮಾಡುತ್ತೇನೆ. ಆದರೆ ನಾನು ರಾಜಕೀಯಕ್ಕೆ ಯಾವುದೇ ಕಾರಣಕ್ಕೂ ಬರಲ್ಲ. ಈಗಾಗಲೇ ಅನೇಕ ಬಾರಿ ಹೇಳಿದ್ದೇನೆ. ರಾಜಕಾರಣದಲ್ಲಿ ಆಸಕ್ತಿಯೂ ಇಲ್ಲ. ನನ್ನ ಆಸಕ್ತಿ ಏನಿದ್ರೂ ಜನರ ಜೊತೆ ಬೆರೆಯುವುದು ಅಷ್ಟೇ’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನೀತಿ ಸಂಹಿತೆ ಉಲ್ಲಂಘನೆ: ಬಿಜೆಪಿ ಟಿಕೆಟ್ ಆಕಾಂಕ್ಷೆಯಿಂದ ಬಾಡೂಟ