Publish Date: Wed, 28 Mar 2018 (06:54 IST)
Updated Date: Wed, 28 Mar 2018 (06:57 IST)
ಬೆಂಗಳೂರು : ಈಗಾಗಲೇ ಅನೇಕ ಬಾರಿ ತಮ್ಮ ವೈಯಕ್ತಿಕ ವಿಷಯದ ಬಗ್ಗೆ ಕೇಳಿದಾಗ ತುಟಿ ಬಿಚ್ಚದ ಸ್ಯಾಂಡಲ್ ವುಡ್ ನಟಿ ಶ್ರದ್ದಾ ಶ್ರೀನಾಥ್ ಅವರು ಮೊದಲಬಾರಿಗೆ ತಮ್ಮ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.
ಕನ್ನಡದ ‘ಯು ಟರ್ನ್’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ನಟಿ ಶ್ರದ್ದಾ ಅವರು ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು ಹಾಗೂ ಬಾಲಿವುಡ್ ನಲ್ಲೂ ಮಿಂಚುತ್ತಿದ್ದಾರೆ. ಇವರ ವೈಯಕ್ತಿಕ ಜೀವನದ ಬಗ್ಗೆ ಗಾಸಿಪ್ ಗಳು ಕೇಳಿಬಂದಿದ್ದರೂ ಪ್ರತಿಕ್ರಿಯೆ ನೀಡದ ಶ್ರದ್ದಾ ಶ್ರೀನಾಥ್ ಅವರು ಇದೀಗ ‘ನಂಬರ್ ಒನ್ ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದಲ್ಲಿ ತಮ್ಮ ಪ್ರೀತಿ ಬಗೆಗಿನ ಗುಟ್ಟೊಂದನ್ನು ರಟ್ಟು ಮಾಡಿದ್ದಾರೆ. ತಾವು ಪ್ರೀತಿಸುತ್ತಿರುವ ಹುಡುಗನ ಹೆಸರು ರೋಹಿತ್ ಕೃಷ್ಣನ್ ಸಾಬು. ಆತ ವೃತ್ತಿಯಲ್ಲಿ ಫೋಟೊಗ್ರಾಫರ್ ಆಗಿದ್ದು, ಚೆನ್ನೈ ನಲ್ಲಿ ನೆಲೆಸಿದ್ದಾನೆ. ತನ್ನ ವೈವಾಹಿಕ ಜೀವನವನ್ನು ರೋಹಿತ್ ಜೊತೆ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ