Select Your Language

Notifications

webdunia
webdunia
webdunia
webdunia

35 ನೇ ವರ್ಷದ ವೆಡ್ಡಿಂಗ್ ಡೇ ಆಚರಿಸಿದ್ರೂ ನವರಸನಾಯಕ ಜಗ್ಗೇಶ್ ಗೆ ಈ ಕೊರತೆ ಕಾಡಿತ್ತು!

35 ನೇ ವರ್ಷದ ವೆಡ್ಡಿಂಗ್ ಡೇ ಆಚರಿಸಿದ್ರೂ ನವರಸನಾಯಕ ಜಗ್ಗೇಶ್ ಗೆ ಈ ಕೊರತೆ ಕಾಡಿತ್ತು!
ಬೆಂಗಳೂರು , ಶುಕ್ರವಾರ, 23 ಮಾರ್ಚ್ 2018 (10:07 IST)
ಬೆಂಗಳೂರು: ನಟ ಜಗ್ಗೇಶ್ ಮದುವೆ ಯಾವ ಸಿನಿಮಾ ಕತೆಗೂ ಕಮ್ಮಿಯಿಲ್ಲ. ಮನೆಯವರ ವಿರೋಧ ಕಟ್ಟಿಕೊಂಡು, ಸುಪ್ರೀಂ ಕೋರ್ಟ್ ವರೆಗೆ ಹೋಗಿ ಬಾಳ ಸಂಗಾತಿ ಪರಿಮಳಾರನ್ನು ಪಡೆದ ಜಗ್ಗೇಶ್ ನಿನ್ನೆಯಷ್ಟೇ 35 ನೇ ವರ್ಷದ ವೆಡ್ಡಿಂಗ್ ಆನಿವರ್ಸರಿ ಆಚರಿಸಿಕೊಂಡಿದ್ದರು.
 

ತಮ್ಮ ಮನೆಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮವನ್ನೂ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಳ್ಳುವ ಜಗ್ಗೇಶ್ ಇದನ್ನೂ ಹಂಚಿಕೊಂಡಿದ್ದಾರೆ. ಸಂಜೆ ತಮ್ಮ ಕುಟುಂಬ ಸದಸ್ಯರೊಂದಿಗೆ ಪಂಚತಾರಾ ಹೋಟೆಲ್ ನಲ್ಲಿ ಕೇಕ್ ಕತ್ತರಿಸಿ ಜಗ್ಗೇಶ್ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

ಈ ವೇಳೆ ಮೊಮ್ಮಗ ಅರ್ಜುನ್, ಹಿರಿಯ ಪುತ್ರ ಗುರು, ಸೊಸೆಯೂ ಜತೆಗಿದ್ದರು. ಆದರೆ ಕಿರಿಯ ಪುತ್ರ ಯತೀಂದ್ರ ಜತೆಗಿರಲಿಲ್ಲ ಎಂಬ ಬೇಸರದಲ್ಲಿ ಜಗ್ಗೇಶ್ ಇದ್ದರು. ಯತೀಂದ್ರ ಒಬ್ಬನನ್ನು ಮಿಸ್ ಮಾಡಿಕೊಂಡೆ ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ. ಆತ ಸದ್ಯಕ್ಕೆ ಸದ್ಗುರು ವಾಸುದೇವ್ ಆಶ್ರಮದಲ್ಲಿ ಯೋಗ ತರಬೇತಿಗೆ ಹೋಗಿದ್ದ ಕಾರಣ ನಮಗೆ ಜತೆಯಾಗಲು ಸಾಧ್ಯವಾಗಲಿಲ್ಲ ಎಂದು ಖುಷಿಯ ಕ್ಷಣದಲ್ಲೂ ಬೇಸರಿಸಿಕೊಂಡಿದ್ದಾರೆ ಜಗ್ಗೇಶ್.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ನಟ, ನಿರ್ಮಾಪಕನ ವಿರುದ್ಧ ಕೇಸ್