ಬೆಂಗಳೂರು : ಸ್ಯಾಂಡಲ್ ವುಡ್ ನ ನಟ ಡಿಂಪಲ್ ದಿಗಂತ್ ಹಾಗೂ ನಟಿ ಐಂದ್ರಿತಾ ರೇ ಅವರು ಒಬ್ಬರನೊಬ್ಬರು ಪ್ರೀತಿಸುತ್ತಿರುವ ವಿಷಯ ಎಲ್ಲರಿಗೂ ತಿಳಿದೆ ಇದೆ. ಆದರೆ ಇದೀಗ ನಟ ದಿಗಂತ್ ಅವರು ಇದೇ ವರ್ಷ ಮದುವೆ ಆಗುವ ಮನಸ್ಸು ಮಾಡಿರುವುದಾಗಿ ತಿಳಿಸಿದ್ದಾರೆ.
ಶಿವರಾಜ್ ಕುಮಾರ್ ಅವರು ನಡೆಸಿಕೊಡುತ್ತಿರುವ ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದಲ್ಲಿ ಲೂಸ್ ಮಾದ ಯೋಗಿ ಅವರ ಜೊತೆ ಭಾಗವಹಿಸಿದ್ದ ದಿಗಂತ್ ಅವರಿಗೆ ಶಿವರಾಜ್ ಕುಮಾರ್ ಅವರು ನಿಮ್ಮ ಜೀವನದಲ್ಲಿ ಯಾವ ಕ್ಷಣಕ್ಕೋಸ್ಕರ ನೀವು ಕಾಯಲು ಆಗುವುದಿಲ್ಲ, ಕಾಯುವುದಿಲ್ಲ.? ಎಂದು ಪ್ರಶ್ನಿಸಿದಾಗ ಅದಕ್ಕೆ ದಿಗಂತ್ ಅವರು,’ ನನ್ನ ಮದುವೆಗೆ ಕಾಯುತ್ತಿದ್ದೇನೆ. ಇದೇ ವರ್ಷ ಮದುವೆ ಆಗಲು ಮನಸ್ಸು ಮಾಡಿದ್ದೇನೆ. ಅದಕ್ಕೋಸ್ಕರ ಕಾಯುತ್ತಿದ್ದೇನೆ ಎಂದು ಉತ್ತರಿಸಿದ್ದಾರೆ. ಒಟ್ಟಾರೆ ಡಿಪಲ್ ದಿಗಂತ್ ಅವರು ಈ ವರ್ಷವೇ ತಮ್ಮ ಅಭಿಮಾನಿಗಳಿಗೆ ಮದುವೆ ಊಟ ಹಾಕಿಸೋದು ಗ್ಯಾರಂಟಿ ಎನ್ನುವುದು ಅರ್ಥವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ