Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ನಟಿ ಮೇಘನಾ ಗಾಂವ್ಕರ್ ಅವರನ್ನು ಡೇಟಿಂಗ್ ಗೆ ಆಹ್ವಾನಿಸಿದ ಭೂಪ!

ಸ್ಯಾಂಡಲ್ ವುಡ್ ನಟಿ ಮೇಘನಾ ಗಾಂವ್ಕರ್ ಅವರನ್ನು ಡೇಟಿಂಗ್ ಗೆ ಆಹ್ವಾನಿಸಿದ ಭೂಪ!
ಬೆಂಗಳೂರು , ಬುಧವಾರ, 21 ಮಾರ್ಚ್ 2018 (16:24 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ನಟಿಯೊಬ್ಬರನ್ನು ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಇ-ಮೇಲ್ ಮೂಲಕ ಡೇಟಿಂಗ್ ಗೆ ಕರೆದಿರುವುದಾಗಿ  ಮಾಹಿತಿ ತಿಳಿದುಬಂದಿದೆ.


‘ಚಾರ್ ಮಿನಾರ್’ ಚಿತ್ರದಲ್ಲಿ ಪ್ರೇಮ ಅವರ ಜೊತೆ ನಟಿಸಿದ ನಟಿ ಮೇಘನಾ ಗಾಂವ್ಕರ್ ಅವರನ್ನು ಯಾರೋ ಅಪರಿಚಿತ ವ್ಯಕ್ತಿಯೊಬ್ಬ ಇ-ಮೇಲ್ ಮಾಡಿ ಡೇಟಿಂಗ್ ಗೆ ಆಹ್ವಾನಿಸಿದ್ದಾನೆ. ಹಾಗೆ ತಾನು ಟೆಂಡರ್ ಆ್ಯಪ್ ನಲ್ಲಿ ಅವರನ್ನು ಭೇಟಿಯಾಗಿರುವುದಾಗಿ ತಿಳಿಸಿದ್ದಾನೆ.


ಆದರೆ ನಟಿ ಮೇಘನಾ ಅವರು ಈ ಬಗ್ಗೆ ತಮ್ಮ  ಟ್ವೀಟ್ ಮೂಲಕ,’ ನಾನು ಈ ರೀತಿಯಾದ ಆ್ಯಪ್ ನ್ನು ಬಳಸುತ್ತಿಲ್ಲ. ಅದು ನಾನಲ್ಲ. ನಾನಾಗಿರೋಕೆ ಚಾನ್ಸೆ ಇಲ್ಲ. ಟೆಂಡರ್ ಆ್ಯಪ್ ನಲ್ಲಿ ಮಾತನಾಡಿರುವುದಾಗಿ  ಯಾರೋ ನನಗೆ ಇಮೇಲ್ ಮಾಡಿದ್ರು. ದಯವಿಟ್ಟು ಗಮನಿಸಿ ಅದು ನಾನಲ್ಲ. ಸಾಧ್ಯವಾದರೆ ಆ ಫೇಕ್ ಐಡಿ ಬಗ್ಗೆ ಟೆಂಡರ್ ಗೆ ರಿಪೋರ್ಟ್ ಮಾಡಿ ನೀವು’ ಎಂದು ಉತ್ತರ ನೀಡಿದ್ದಾರೆ.


ಹಾಗೇ ಈ ಬಗ್ಗೆ ಮಾಧ್ಯಮದವರೋಂದಿಗೆ ಮಾತನಾಡಿದ ಮೇಘನಾ ಅವರು ‘ನನ್ನ ಇಮೇಲ್ ಐಡಿ ಇರುವಂತವರೆ ,ಪರಿಚಯದವರೇ ಯಾರೋ ಈ ರೀತಿ ಮೆಸೆಜ್ ಮಾಡಿರಬಹುದು’ ಎಂಬುದಾಗಿ ಹೇಳಿದ್ದಾರೆ. ಆದರೆ ಅವರು ಯಾರೆಂಬುದು ತಿಳಿದುಬಂದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟಿ ರಾಣಿ ಮುಖರ್ಜಿ ತಮ್ಮ ಹುಟ್ಟುಹಬ್ಬವನ್ನು ಈ ಕಾರಣಕ್ಕಾಗಿ ಆಚರಿಸುವುದಿಲ್ಲವಂತೆ!