Select Your Language

Notifications

webdunia
webdunia
webdunia
webdunia

ಜೆಕೆ ನಡೆದ ಹಾದಿಯಲ್ಲೇ ಬಿಗ್ ಬಾಸ್ ಗೆಳತಿ ಶ್ರುತಿ ಪ್ರಕಾಶ್ ನಡೆಯುತ್ತಿದ್ದಾರಾ?!

webdunia
ಬೆಂಗಳೂರು , ಶನಿವಾರ, 24 ಮಾರ್ಚ್ 2018 (09:25 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ 5 ನೇ ಆವೃತ್ತಿಯಲ್ಲಿ ಜೆಕೆ ಅಲಿಯಾಸ್ ಜಯರಾಂ ಕಾರ್ತಿಕ್ ಮತ್ತು ಶ್ರುತಿ ಪ್ರಕಾಶ್ ಗೆಳೆತನ ಭಾರೀ ಜನಪ್ರಿಯವಾಗಿತ್ತು.

ಬಿಗ್ ಬಾಸ್ ನಿಂದ ಹೊರಬಂದ ಮೇಲೆ ಜೆಕೆ ಹಿಂದಿ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಬಂದಿತ್ತು. ಅದರ ಬೆನ್ನಲ್ಲೇ ಇದೀಗ ಶ್ರುತಿ ಪ್ರಕಾಶ್ ಕಡೆಯಿಂದಲೂ ಅಂತಹದ್ದೇ ಸುದ್ದಿ ಬಂದಿದೆ. 

ಈಗಾಗಲೇ ಶ್ರುತಿ ಲಂಡನ್ ನಲ್ಲಿ ಲಂಬೋದರ ಎಂಬ ಕನ್ನಡ ಸಿನಿಮಾಗೆ ನಾಯಕಿಯಾಗಿದ್ದಾರೆ. ಅದರ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿದೆ. ಅದರ ಬೆನ್ನಲ್ಲೇ ಶ್ರುತಿ ಕನ್ನಡದಲ್ಲಿ ಪದಾರ್ಪಣೆಯಾಗುವುದರ ಜತೆಗೆ ಹಿಂದಿಯಲ್ಲೂ ‘ಗುಮ್ನಾಮ್’ ಮೂಲಕ ಡೆಬ್ಯೂಟ್ ಆಗುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇದರ ಬಗ್ಗೆ ಹೆಚ್ಚೇನೂ ಶ್ರುತಿ ಗುಟ್ಟುಬಿಡದಿದ್ದರೂ ಇದು ಬೆಳಗಾವಿ ಬೆಡಗಿಯ ಮೊದಲ ಹಿಂದಿ ಸಿನಿಮಾ ಎಂದು ಅಭಿಮಾನಿಗಳು ಆಗಲೇ ಶುಭಾಷಯಗಳ ಸುರಿಮಳೆಗೈಯಲು ಶುರು ಮಾಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

Share this Story:

Follow Webdunia kannada

ಮುಂದಿನ ಸುದ್ದಿ

ಹುಟ್ಟುಹಬ್ಬದಂದು ಪರಿಸರ ಪ್ರೇಮವನ್ನು ವ್ಯಕ್ತಪಡಿಸಿದ ಕಂಗನಾ ರನಾವತ್