ಬಿಗ್ ಬಾಸ್ ಸೀಸನ್ 5 ಮನೆಗೆ ಬೆಂಕಿ

ಗುರುವಾರ, 22 ಫೆಬ್ರವರಿ 2018 (08:44 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಸೀಸನ್ 5 ಚಿತ್ರೀಕರಣಗೊಂಡ ಬಿಡದಿಯ ಇನ್ನೋವಾ ಸಿಟಿ ಮನೆಗೆ ಬೆಂಕಿ ಬಿದ್ದಿದೆ.
 

ಬೆಳಗಿನ ಜಾವ ಸುಮಾರು 3 ಗಂಟೆಗೆ ಇನೋವಾ ಸಿಟಿ ಮ್ಯೂಸಿಯಂಗೆ ಶಾರ್ಟ್ ಸರ್ಕೀಟ್ ನಿಂದಾಗಿ ಬೆಂಕಿ ತಗಲಿದ್ದು, ಪಕ್ಕದಲ್ಲೇ ಇದ್ದ ಬಿಗ್ ಬಾಸ್ ಸೀಸನ್ 5 ಮನೆಗೂ ಬೆಂಕಿ ತಗುಲಿದೆ.

ಮನೆಯ ಮುಂಭಾಗದ ಕೆಲವು ಪ್ರದೇಶಗಳು ಬೆಂಕಿಗೆ ಆಹುತಿಯಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಂಗನಾ ರಣಾವತ್ ರಾಜಕೀಯ ಎಂಟ್ರಿ ಬಗ್ಗೆ ನಟಿಯ ಮ್ಯಾನೇಜರ್ ಹೇಳಿದ್ದೇನು....?