ಬೆಂಗಳೂರು: ಈ ಬಾರಿಯ ಬಿಗ್ ಬಾಸ್ ಕನ್ನಡ ಆವೃತ್ತಿ ಗೆದ್ದ ಚಂದನ್ ಶೆಟ್ಟಿ 50 ಲಕ್ಷ ರೂ. ಜೇಬಿಗಿಳಿಸಿಕೊಂಡಿದ್ದಾರೆ.
 
ಗೆದ್ದ ತಕ್ಷಣ ಆ ಹಣವನ್ನು ತಕ್ಷಣ ತಂದೆಗೆ ಉಡುಗೊರೆಯಾಗಿ ನೀಡಿದ್ದ ಚಂದನ್ ಈ ಹಣ ನಿಮಗೇ ಎಂದಿದ್ದರು. ಚಂದನ್ ಹೊರ ಬರುತ್ತಿದ್ದಂತೆ ಅವರಿಗೆ ಭಾರೀ ಸ್ವಾಗತವೂ ದೊರೆಯಿತು. ಮನೆಯೊಳಗಿದ್ದಾಗ ಹೆಚ್ಚಾಗಿ ಮದುವೆ ಬಗ್ಗೆ ಮಾತನಾಡುತ್ತಿದ್ದ ಚಂದನ್ ಹೊರ ಬಂದ ಮೇಲೆ ಮದುವೆ ಮಾಡಿಕೊಳ್ಳುತ್ತಾರೋ ಬಿಡುತ್ತಾರೋ ಗೊತ್ತಿಲ್ಲ.
									
			
			 
 			
 
 			
			                     
							
							
			        							
								
																	ಆದರೆ ಇದುವರೆಗೆ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ ಚಂದನ್ ಗೆ ಇನ್ನಾದರ ಸ್ವಂತ ಮನೆ ಕೊಂಡುಕೊಳ್ಳಬೇಕೆಂಬ ಆಸೆಯಿದೆಯಂತೆ. ಹಾಗಾಗಿ ಬಿಗ್ ಬಾಸ್ ನಲ್ಲಿ ಗೆದ್ದ ಹಣದಲ್ಲಿ ಏನಿಲ್ಲವೆಂದರೂ ಸ್ವಂತಕ್ಕೊಂದು ಫ್ಲ್ಯಾಟ್ ಕೊಳ್ಳಬೇಕೆಂದಿರುವುದಾಗಿ ಚಂದನ್ ಹೇಳಿಕೊಂಡಿದ್ದಾರೆ. ಸ್ವಂತಕ್ಕೊಂದು ಸೂರು ಮಾಡಿಕೊಳ್ಳಬೇಕೆಂಬುದು ತಮ್ಮ ಕನಸಾಗಿತ್ತು ಎಂದು ಚಂದನ್ ಹೇಳಿಕೊಂಡಿದ್ದಾರೆ.
									
										
								
																	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ