Publish Date: Tue, 30 Jan 2018 (06:12 IST)
Updated Date: Tue, 30 Jan 2018 (06:20 IST)
ಬೆಂಗಳೂರು : ಬಹು ನಿರೀಕ್ಷಿತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5 ರ ಫಿನಾಲೆ ಮುಗಿದಿದ್ದು, ಮನೆಯವರನ್ನು ಹಾಗು ವೀಕ್ಷಕರನ್ನು ಸಂಗೀತದ ಮೂಲಕ ರಂಜಿಸುತ್ತಿದ್ದ ಚಂದನ್ ಶೆಟ್ಟಿ ಅವರು ಗೆಲುವಿನ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬಿಗ್ ಬಾಸ್ ನಲ್ಲಿ ವಿನ್ ಆದ್ರೆ ಬಂದ ಹಣದಲ್ಲಿ ಅಪ್ಪ ಅಮ್ಮನಿಗೊಂದು ಮನೆ ಕೊಡಿಸ್ತೀನಿ ಎಂದು ಚಂದನ್ ಶೆಟ್ಟಿ ಅವರು ಹೇಳಿದ್ದರು. ಇದೀಗ ಅವರ ತಾಯಿ ಬಿಗ್ ಬಾಸ್ ನಲ್ಲಿ ಗೆದ್ದ ತಮ್ಮ ಮಗನಿಗೆ ಶಿಜ್ಲಾ ಬ್ರೀಡ್ ಎಂಬ ಚೈನಾ ನಾಯಿಮರಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ನಾಯಿಮರಿಗೆ ‘ಆಪಲ್’ ಎಂದು ಹೆಸರಿಡಬೇಕು ಎಂದು ಚಂದನ್ ಅವರ ಆಸೆಯಾಗಿತ್ತು. ಅದರಂತೆ ಆ ನಾಯಿಮರಿಗೆ ‘ಆಪಲ್’ ಎಂದು ಹೆಸರಿಡಲಾಗಿದೆ.
ಚಂದನ್ ಶೆಟ್ಟಿ ಅವರಿಗೆ ಪ್ರಾಣಿ ಹಾಗೂ ಪಕ್ಷಿಗಳೆಂದರೆ ಬಹಳ ಪ್ರೀತಿಯಂತೆ. ನಾಯಿ, ಬೆಕ್ಕು, ಪಕ್ಷಿಗಳನ್ನು ಸಾಕಿಕೊಳ್ಳೋಕೆ ಬಹಳ ಇಷ್ಟ ಪಡುತ್ತಾರಂತೆ. ಆದರೆ ಬೆಂಗಳೂರಿಗೆ ಬಂದ ಮೇಲೆ ಅವರು ಪ್ರಾಣಿಗಳನ್ನು ಸಾಕಲು ಸಾಧ್ಯವಾಗಲಿಲ್ಲವೆಂದು ಇದೀಗ ಅವರ ತಾಯಿ ನಾಯಿಮರಿಯನ್ನು ಉಡುಗೊರೆ ನೀಡುವ ಮೂಲಕ ಚಂದನ್ ಅವರಿಗೆ ಗೆಲುವಿನ ಖುಷಿಯ ಜೊತೆಗೆ ಈ ಸರ್ಪೈಸ್ ಉಡುಗೊರೆಯನ್ನು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ