Publish Date: Tue, 30 Jan 2018 (06:02 IST)
Updated Date: Tue, 30 Jan 2018 (06:10 IST)
ಬೆಂಗಳೂರು : ಕರುನಾಡ ಜನರ ಮನಗೆದ್ದಿರುವ ಸ್ಯಾಂಡಲ್ ವುಡ್ ನ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅವರ ಅಭಿಮಾನಿಗಳು ಅನೇಕ ಹೆಸರಿನಿಂದ ಅವರನ್ನು ಕರೆಯುತ್ತಿದ್ದು, ಈಗ ಮತ್ತೊಂದು ಬಿರುದು ಅವರ ಮುಡಿಗೇರಿದೆ.
ಈಗಾಗಲೇ ದರ್ಶನ್ ಅವರನ್ನು ದಾಸ, ಡಿ ಬಾಸ್, ಚಾಲೆಂಜಿಂಗ್ ಸ್ಟಾರ್, ಕರುನಾಡಿನ ಕರ್ಣ, ಬಾಕ್ಸ್ ಆಫೀಸ್ ಸುಲ್ತಾನ್, ದಚ್ಚು ಹೀಗೆ ಅನೇಕ ಹೆಸರಿನಿಂದ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಿದ್ದು, ಈಗ ದರ್ಶನ್ ಅವರ ಸ್ನೇಹಿತ ಹಾಗೂ ಕವಿರತ್ನ ಅಂತಾನೇ ಹೆಸರು ಗಳಿಸಿರುವ ವಿ. ನಾಗೇಂದ್ರ ಪ್ರಸಾದ್ ಅವರು `ಶತಸೋದರಾಗ್ರಜಾ ಶರವೀರ’ ಎಂದು ಹೊಸ ಬಿರುದನ್ನು ನೀಡಿದ್ದಾರೆ.
‘ದರ್ಶನ್ ನೂರಾರು ಜನರ ಸಹೋದರ ಹಾಗೂ ತಮ್ಮ ಸುತ್ತಮುತ್ತ ಇರುವವರನ್ನ ಸಹೋದರರಂತೆ ಕಾಣುತ್ತಾರೆ. ಈ ಕಾರಣಕ್ಕೆ ಶತಸೋದರಾಗ್ರಜಾ ಎಂದು ಕರೆಯಲಾಗಿದೆ. ಗದಾಯುದ್ಧ ಹಾಗೂ ಬಿಲ್ಲು ವಿದ್ಯೆಯಲ್ಲೂ ವೀರನಾಗಿರುವ ಕಾರಣ ಶರವೀರ ಎಂದು ಬಿರುದು ನೀಡಲಾಗಿದೆ’ ಎಂದು ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ