Select Your Language

Notifications

webdunia
webdunia
webdunia
webdunia

ಇಂದು ಗೌರಿ ಲಂಕೇಶ್ ಜನ್ಮದಿನ; ಗೌರಿ ದಿನದಂದು ಟೌನ್ ಹಾಲ್ ಗೆ ಬರಲಿದ್ದವರು ಯಾರು ಗೊತ್ತಾ…?

ಇಂದು ಗೌರಿ ಲಂಕೇಶ್ ಜನ್ಮದಿನ; ಗೌರಿ ದಿನದಂದು ಟೌನ್ ಹಾಲ್ ಗೆ ಬರಲಿದ್ದವರು ಯಾರು ಗೊತ್ತಾ…?
ಬೆಂಗಳೂರು , ಸೋಮವಾರ, 29 ಜನವರಿ 2018 (11:46 IST)
ಬೆಂಗಳೂರು : ಹಂತಕರ ಗುಂಡಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್‍ ಅವರ ಜನ್ಮದಿನದ ಅಂಗವಾಗಿ ಇಂದು ನಗರದ ಟೌನ್‍ಹಾಲ್‍ನಲ್ಲಿ `ಗೌರಿ ದಿನ’ ಎಂಬ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿದೆ.


ಈ ಕಾರ್ಯಕ್ರಮಕ್ಕೆ ಜಿಗ್ನೇಶ್ ಮೇವಾನಿ, ಕನ್ನಯ್ಯ ಕುಮಾರ್, ದೊರೆಸ್ವಾಮಿ, ಪ್ರಕಾಶ್ ರೈ ಸೇರಿದಂತೆ ಸಾಕಷ್ಟು ಸಾಹಿತಿಗಳು ಆಗಮಿಸಲಿದ್ದಾರೆ. ಇಂದು ಗೌರಿ ಲಂಕೇಶ್ ಕುರಿತಾದ ಪುಸ್ತಕವನ್ನು ಕೂಡ ಬಿಡುಗಡೆ ಮಾಡಲಿದ್ದಾರೆ.


ಸೆಪ್ಟೆಂಬರ್ 5 2017 ಮಂಗಳವಾರ ರಾತ್ರಿ 7.30 ರ ಸುಮಾರಿಗೆ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಅವರ ಮನೆಯ ಮುಂಭಾಗವೇ ಮೂವರು ದುಷ್ಕರ್ಮಿಗಳು ಬೈಕಿನಲ್ಲಿ ಬಂದು ಗುಂಡಿಟ್ಟು ಹತ್ಯೆ ಮಾಡಿದ್ದರು. ಗೌರಿ ಹತ್ಯೆಗೆ ನ್ಯಾಯ ಕೇಳಿ ‘ಗೌರಿ ಸ್ಮಾರಕ’ ಇಂದು ಬೀದಿಗಿಳಿದು ಹೋರಾಟ ಮಾಡಲಿದ್ದು, ಈ ಮೂಲಕ `ನಾನು ಗೌರಿ’ ಅನ್ನೋ ಹೋರಾಟವನ್ನ ಮತ್ತೆ ಶುರುಮಾಡುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಂಸತ್ತಿನ ಹೊರಗೆ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?!