Select Your Language

Notifications

webdunia
webdunia
webdunia
webdunia

ಕಂಗನಾ ರಣಾವತ್ ರಾಜಕೀಯ ಎಂಟ್ರಿ ಬಗ್ಗೆ ನಟಿಯ ಮ್ಯಾನೇಜರ್ ಹೇಳಿದ್ದೇನು....?

ಕಂಗನಾ ರಣಾವತ್ ರಾಜಕೀಯ ಎಂಟ್ರಿ ಬಗ್ಗೆ ನಟಿಯ ಮ್ಯಾನೇಜರ್ ಹೇಳಿದ್ದೇನು....?
ಮುಂಬೈ , ಗುರುವಾರ, 22 ಫೆಬ್ರವರಿ 2018 (06:36 IST)
ಮುಂಬೈ : ಬಾಲಿವುಡ್  ನಟಿ ಕಂಗನಾ ರಣಾವತ್ ರಾಜಕೀಯಕ್ಕೆ ಪ್ರವೇಶಿಸುತ್ತಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಈಗ ನಟಿಯ ಮ್ಯಾನೇಜರ್ ಈ ಸುದ್ದಿಯಲ್ಲಿ ನಿಜವಾದ ಅಂಶ ಇಲ್ಲ, ಇದೊಂದು ಸುಳ್ಳು ಸುದ್ದಿ ಎಂದು ಹೇಳುವುದರ ಮೂಲಕ ಈ ಗಾಸಿಪ್ ಗೆ ತೆರೆ ಎಳೆದಿದ್ದಾರೆ.


‘ಕಂಗನಾ ಯಾವ ಪಕ್ಷವನ್ನು ಸೇರುತ್ತಿಲ್ಲ ಹಾಗೂ ಪ್ರಧಾನಿ ಮೋದಿ ಅವರನ್ನು ಕೂಡ ಭೇಟಿ ಆಗಿಲ್ಲ. ಹಾಗಾಗಿ ಈ ಸುದ್ದಿ ಸುಳ್ಳು. ಕಂಗನಾ ರಾಜಕೀಯದಲ್ಲಿ ಯಾವುದೇ ಆಸಕ್ತಿ ತೋರಿಸಿಲ್ಲ. ಸದ್ಯ ಅವರು ಮಣಿಕರ್ಣಿಕಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ ಹಾಗೂ ಸಾಲುಸಾಲು ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಅಧಿಕೃತ ಮಾಹಿತಿ ಬರುವವರೆಗೂ ದಯವಿಟ್ಟು ಈ ರೀತಿಯ ಸುದ್ದಿಗಳನ್ನು ನಂಬಬೇಡಿ ಎಂದು ಕಂಗನಾ ಮ್ಯಾನೇಜರ್ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳು ನಟ ವಿಜಯ್‌ ಚಿತ್ರತಂಡಕ್ಕೆನೀಡಿದ ಕಟ್ಟೆಚ್ಚರ ಏನು ಗೊತ್ತಾ...?