Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟ ಹೃತಿಕ್ ರೋಷನ್ ಬೀದಿ ಬೀದಿಯಲ್ಲಿ ಹಪ್ಪಳ ಮಾರಿದ್ದು ಯಾಕೆ ಗೊತ್ತಾ...?

ಬಾಲಿವುಡ್ ನಟ ಹೃತಿಕ್ ರೋಷನ್ ಬೀದಿ ಬೀದಿಯಲ್ಲಿ ಹಪ್ಪಳ ಮಾರಿದ್ದು ಯಾಕೆ ಗೊತ್ತಾ...?
ಮುಂಬೈ , ಗುರುವಾರ, 22 ಫೆಬ್ರವರಿ 2018 (06:28 IST)
ಮುಂಬೈ : ಎಂಜಿನಿಯರಿಂಗ್ ಪದವಿ ಪಡೆಯುವ ಆಸಕ್ತಿ ಹೊಂದಿರುವ ಬಡ ವಿದ್ಯಾರ್ಥಿಗಳಿಗಾಗಿ ಸೂಪರ್ 30 ಕೋಚಿಂಗ್ ಸೆಂಟರ್ ವೊಂದನ್ನು ನಡೆಸುತ್ತಿರುವ ಆನಂದ್ ಕುಮಾರ್ ಅವರ ಜೀವನಾಧರಿತ ‘ಸೂಪರ್ 30’ ಚಿತ್ರ ದಲ್ಲಿ ನಟ  ಹೃತಿಕ್ ರೋಷನ್ ಅಭಿನಯಿಸುತ್ತಿದ್ದು, ಈ ಚಿತ್ರಕ್ಕಾಗಿ ಅವರು ಜೈಪುರದ ಬೀದಿ ಬೀದಿಯಲ್ಲಿ ಹಪ್ಪಳ ಮಾರುತ್ತಿದ್ದಾರೆ.


ವಿಕಾಸ್ ಬಹ್ಲ್ ಅವರು ನಿರ್ದೇಶಿಸುವ ಈ ಚಿತ್ರದಲ್ಲಿ ಹೃತಿಕ್ ರೋಷನ್ ಅವರು ಆನಂದ್ ಕುಮಾರ್ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದು, ಹಳೆಯ ಪ್ಯಾಂಟ್, ಶರ್ಟ್ ಧರಿಸಿ ಹೆಗಲ ಮೇಲೊಂದು ಟವಲ್ ಹಾಕಿಕೊಂಡು ಸೈಕಲ್ ಏರಿ ಹಪ್ಪಳ ಮಾರಾಟ ಮಾಡುತ್ತಿದ್ದಾರೆ. ಹೃತಿಕ್ ರೋಷನ್ ಅವರು ಈ ಪಾತ್ರಕ್ಕೆ ಎಷ್ಟರ ಮಟ್ಟಿಗೆ ಜೀವ ತುಂಬಿದ್ದಾರೆಂದರೆ ಅವರ ಈ ವೇಷಭೂಷಣ ಕಂಡು ಜನಸಾಮಾನ್ಯರು ಯಾರೂ ಗುರುತು ಹಿಡಿಯಲಿಲ್ಲ. ಅಲ್ಲದೆ ಸ್ವತಃ ಆನಂದ್ ಕುಮಾರ್ ಅವರೇ ಹೃತಿಕ್ ರೋಷನ್ ಅವರ ಅಭಿನಯಕ್ಕೆ  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ಬಗ್ಗೆ ಕೇಳಿಬಂದ ರೂಮರ್ಸ್ ಗೆ ತಾವೇ ಸ್ಪಷ್ಟನೆ ಕೊಟ್ಟ ಕಿಚ್ಚ ಸುದೀಪ್