Select Your Language

Notifications

webdunia
webdunia
webdunia
webdunia

ಸಮವಸ್ತ್ರದ ಅಳತೆಗೆಂದು ವಿದ್ಯಾರ್ಥಿನಿಯನ್ನು ಸಂಪೂರ್ಣ ವಿವಸ್ತ್ರಗೊಳಿಸಿದ ಶಿಕ್ಷಕ

ಸಮವಸ್ತ್ರದ ಅಳತೆಗೆಂದು ವಿದ್ಯಾರ್ಥಿನಿಯನ್ನು ಸಂಪೂರ್ಣ ವಿವಸ್ತ್ರಗೊಳಿಸಿದ ಶಿಕ್ಷಕ
ಲಖನೌ , ಮಂಗಳವಾರ, 20 ಫೆಬ್ರವರಿ 2018 (17:19 IST)
ಉತ್ತರ ಪ್ರದೇಶದ ಸರ್ಕಾರಿ ಶಾಲಾ ಶಿಕ್ಷಕ ವಿದ್ಯಾರ್ಥಿನಿಯೊಬ್ಬಳ ಸಮವಸ್ತ್ರದ ಅಳತೆ ತೆಗೆದುಕೊಳ್ಳುವುದಾಗಿ ಬಟ್ಟೆಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದಾನೆ.
ಈ ಘಟನೆಯು ಕನ್ನೌಜ್‌ನ ಜಲಾಲ್‌ಪುರ್ ಕತ್ರಿ ಬಂಗೇರ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
 
ಶಿಕ್ಷಕ ವಿದ್ಯಾರ್ಥಿಯನ್ನು ಕೊಠಡಿಯೊಂದಕ್ಕೆ ಕರೆದು ಅವಳ ಬಟ್ಟೆಗಳನ್ನು ತೆಗೆಯುವಂತೆ ಆದೇಶಿಸಿದ್ದಾನೆ. ಇದಕ್ಕೆ ಅವನು ಶಾಲಾ ಸಮವಸ್ತ್ರಕ್ಕಾಗಿ ಹುಡುಗಿಯ ಅಳತೆಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂಬ ಕಾರಣ ನೀಡಿದ್ದಾನೆ. ಹೆದರಿದ ಹುಡುಗಿ ಶಿಕ್ಷಕ ಹೇಳಿದಂತೆ ಮಾಡಿದ್ದಾಳೆ.
 
ಅನೇಕ ಸಹಪಾಠಿಗಳು ವಿದ್ಯಾರ್ಥಿನಿಯೊಂದಿಗೆ ನಡೆದ ಈ ಘಟನೆಗೆ ಸಾಕ್ಷಿಯಾಗಿದ್ದಾರೆ, ನಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಮಾಡಿದ್ದಾರೆ. ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿನೆಮಾ ನಟನ ಪತ್ನಿಯ ಎದುರೇ ನಡೆಯಿತು ಕಾಮುಕನ ಹೀನ ಕೃತ್ಯ