Select Your Language

Notifications

webdunia
webdunia
webdunia
webdunia

ಶಾಲೆಗ ರಜೆ ಘೋಷಿಸಿ ಗುಂಡು ತುಂಡಿನ ಪಾರ್ಟಿ ಮಾಡಿದ ಶಿಕ್ಷಕರು!

ಶಾಲೆಗ ರಜೆ ಘೋಷಿಸಿ ಗುಂಡು ತುಂಡಿನ ಪಾರ್ಟಿ ಮಾಡಿದ ಶಿಕ್ಷಕರು!
ವಿಜಯಪುರ , ಸೋಮವಾರ, 5 ಫೆಬ್ರವರಿ 2018 (12:26 IST)
ವಿಜಯಪುರ: ಶಿಕ್ಷಕರೊಬ್ಬರು ನಿವೃತ್ತಿ ಹೊಂದಿದ ಹಿನ್ನೆಲೆ  ಉಳಿದ ಶಿಕ್ಷಕರೆಲ್ಲಾ ಒಟ್ಟಿಗೆ ಸೇರಿ ಗುಂಡು, ತುಂಡಿನ ಪಾರ್ಟಿ ನಡೆಸಿದ ಘಟನೆಯೊಂದು ನಡೆದಿದೆ.


ಮುದ್ದೇಬಿಹಾಳದ ರಕ್ಕಸಗಿ ಸರ್ಕಾರಿ ಪ್ರೌಢ ಶಾಲೆ ಮಕ್ಕಳಿಗೆ ಅನಧಿಕೃತವಾಗಿ ರಜೆ ಸಾರಿ ಶಿಕ್ಷಕರೆಲ್ಲಾ ಪಕ್ಕದ ಹೊಲದಲ್ಲಿ ಸೇರಿ ಗುಂಡು ತುಂಡು ಪಾರ್ಟಿ ನಡೆಸಿದ್ದಾರೆ. ಈ ಘಟನೆ ಜನವರಿ 31 ರಂದು ನಡೆದಿದ್ದು ಈಗ ಬೆಳಕಿಗೆ ಬಂದಿದೆ.
ಬಿ.ಆರ್‌.ಲಮಾಣಿ ಎನ್ನುವ ಶಿಕ್ಷಕ ನಿವೃತ್ತಿಯಾದ ಸಂಭ್ರಮಕ್ಕೆ ಮುಖ್ಯೋಪಾಧ್ಯಾಯ ಎ.ಎಚ್‌.ಬಿರಾದಾರ್‌ ಮತ್ತು ನಾಲ್ವರು ಸಹ ಶಿಕ್ಷಕರು ಈ ಭರ್ಜರಿ ಪಾರ್ಟಿ ಮಾಡುತ್ತಿದ್ದಾರೆ. 


ಯಾವುದೇ ಉದ್ದೇಶವಿಲ್ಲದೆ ರಜೆ ಸಾರಿದ್ದರ ಬಗ್ಗೆ ಅನುಮಾನಗೊಂಡ ಪೋಷಕರು ಮತ್ತು ಸಾರ್ವಜನಿಕರು ಸ್ಥಳಕ್ಕೆ ತೆರಳಿ ಶಿಕ್ಷಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಕೇಳಿದಾಗ ಬಿರಾದಾರ್ ಅವರು ನಾನು ಸುರಪುರದ ದೊರೆ ನನ್ನನ್ನು ಕೇಳುವವರು ಯಾರು? ಎಂದಿದ್ದಾರೆ. ಮಾತ್ರವಲ್ಲದೆ ಬಿಇಓ ಅವರಿಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ಈ ಬಗ್ಗೆ ನಾಲ್ವರು ಶಿಕ್ಷಕರನ್ನು ಅಮಾನತು ಮಾಡುಲು ಬಿಇಓ ಅವರು ಡಿಡಿಪಿಐಗೆ ಶಿಫಾರಸು ಪತ್ರ ಕಳುಹಿಸಿರುವ ಬಗ್ಗೆ ವರದಿಯಾಗಿದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಸದಾನಂದ ಗೌಡ