Select Your Language

Notifications

webdunia
webdunia
webdunia
webdunia

ಎಷ್ಟು ಮಕ್ಕಳಿಗೆ ಜನ್ಮ ನೀಡ್ತೀರಿ ಎಂದು ವಿದ್ಯಾರ್ಥಿನಿಯರನ್ನು ಕೇಳಿದ ಪ್ರಾಚಾರ್ಯ

ಎಷ್ಟು ಮಕ್ಕಳಿಗೆ ಜನ್ಮ ನೀಡ್ತೀರಿ ಎಂದು ವಿದ್ಯಾರ್ಥಿನಿಯರನ್ನು ಕೇಳಿದ ಪ್ರಾಚಾರ್ಯ
ಬಳ್ಳಾರಿ , ಬುಧವಾರ, 24 ಜನವರಿ 2018 (09:57 IST)
ವಿದ್ಯಾರ್ಥಿನಿಯರ ಮೈ–ಕೈ ಮುಟ್ಟಿ ಮಾತನಾಡಿಸುವ ಪ್ರಾಚಾರ್ಯರೊಬ್ಬರು ಎಷ್ಟು ಮಕ್ಕಳಿಗೆ ಜನ್ಮ ನೀಡುತ್ತೀರಿ ಎಂದು ಕೇಳುವ ಮೂಲಕ ಲೈಂಗಿಕ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಬಳಿ ಮೊರಾರ್ಜಿ ಶಾಲೆಯ ಪ್ರಾಚಾರ್ಯ ಶಶಿಧರ ಅವರು ಮೇಲಿನಂತೆ ಅಸಭ್ಯವಾಗಿ ವಿದ್ಯಾರ್ಥಿನಿಯರೊಂದಿಗೆ ನಡೆದುಕೊಂಡಿದ್ದು, ವಿದ್ಯಾರ್ಥಿಗಳು ಶಶಿಧರ ವಿರುದ್ಧ ಆಕ್ರೋಶಗೊಂಡಿದ್ದಾರೆ. ಪ್ರಾಚಾರ್ಯರನ್ನು ವರ್ಗಾವಣೆ ಮಾಡಲು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ವಿದ್ಯಾರ್ಥಿನಿಯರನ್ನು ಕೆಟ್ಟ ದೃಷ್ಠಿಯಿಂದ ನೋಡುವ ಶಶಿಧರ ಅವಾಚ್ಯವಾಗಿ ಮಾತನಾಡುವ ಮೂಲಕ ಲೈಂಗಿಕ ಶಿಕ್ಷಣದ ಬೋಧನೆ ಮಾಡುತ್ತಾನೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಈ ಹಿಂದೆಯೂ ಹಡಗಲಿಯಲ್ಲಿ ಕೆಲಸ ಮಾಡುತ್ತಿದ್ದಾಗ ಶಶಿಧರ ಇದೇ ರೀತಿ ವರ್ತಿಸಿದ್ದರಿಂದ ಇಲ್ಲಿಗೆ ವರ್ಗಾವಣೆ ಮಾಡಲಾಗಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನೃತ್ಯ ಮಾಡಿ 5 ರೂ. ಸಂಪಾದನೆ ಮಾಡಿದ ಸಿಎಂ ಸಿದ್ದರಾಮಯ್ಯ!