Select Your Language

Notifications

webdunia
webdunia
webdunia
webdunia

ಲೈಂಗಿಕ ಕಿರುಕುಳಕ್ಕೊಳಗಾಗುವ ನಟಿಯರಿಗೆ ಜಗ್ಗೇಶ್ ನೆರವಾಗಿದ್ದು ಹೇಗೆ?

ಲೈಂಗಿಕ ಕಿರುಕುಳಕ್ಕೊಳಗಾಗುವ ನಟಿಯರಿಗೆ ಜಗ್ಗೇಶ್ ನೆರವಾಗಿದ್ದು ಹೇಗೆ?
ಬೆಂಗಳೂರು , ಭಾನುವಾರ, 21 ಜನವರಿ 2018 (09:02 IST)
ಬೆಂಗಳೂರು: ಅವಕಾಶಕ್ಕಾಗಿ ನಿರ್ಮಾಪಕರೊಬ್ಬರು ಮಂಚಕ್ಕೆ ಕರೆದರೆಂದು ನಟಿ ಶ್ರುತಿ ಹರಿಹರನ್ ಆರೋಪ ಮಾಡಿದ್ದು ಭಾರೀ ಸುದ್ದಿಯಾಗಿತ್ತು. ಇದರ ಬಗ್ಗೆ ಜಗ್ಗೇಶ್ ಪ್ರತಿಕ್ರಿಯಿಸಿದ್ದು, ತಮ್ಮದೇ ರೀತಿಯಲ್ಲಿ ಸಮಸ್ಯೆ ಬಗೆ ಹರಿಸಲು ಮುಂದಾಗಿದ್ದಾರೆ.
 

ನಟಿಯರ ಸಮಸ್ಯೆ ಬಗ್ಗೆ ಜಗ್ಗೇಶ್ ಈಗಾಗಲೇ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಜತೆ ಚರ್ಚಿಸಿದ್ದಾರಂತೆ. ಅಲ್ಲದೆ, ಮುನಿರತ್ನ ಕೂಡಾ ಸದ್ಯದಲ್ಲೇ ಸಭೆ ಕರೆಯುವುದಾಗಿ ಭರವಸೆ ನೀಡಿದ್ದಾರಂತೆ. ಈ ಮೂಲಕ ಸಭೆಯಲ್ಲಿ ಸಮಸ್ಯೆ ಕುರಿತು ಚರ್ಚಿಸುವುದಾಗಿ ಹೇಳಿದ್ದಾರೆ. ಅಲ್ಲದೆ, ನಟಿ ಶ್ರುತಿ ಹಾಸನ್ ಗೂ ಮುನಿರತ್ನ ಸಭೆಯಲ್ಲಿ ಪಾಲ್ಗೊಂಡು ಸಮಸ್ಯೆ ಹೇಳಿಕೊಳ್ಳಿ ಎಂದು ಜಗ್ಗೇಶ್ ಸಲಹೆ ನೀಡಿದ್ದಾರೆ.

ಯಾರಿಗೆ ಏನೇ ಸಮಸ್ಯೆಯಾದರೂ ಮುಲಾಜಿಲ್ಲದೇ ದೂರು ನೀಡಿ. ಹೆಣ್ಣು ಮಕ್ಕಳಿಗೆ ತೊಂದರೆ ನೀಡುವವರಿದ್ದರೆ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಜಗ್ಗೇಶ್ ಖಡಕ್ ಆಗಿ ಹೇಳಿದ್ದಾರೆ.  ಹೀಗಾದರೂ ತೆರೆಮರೆಯಲ್ಲಿರುವ ಇನ್ನಷ್ಟು ನೋವಿನ ಘಟನೆಗಳು ಹೊರಬರುತ್ತವಾ? ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯಕ್ಕೆ ಸೇರಲು ಆಸಕ್ತಿ ಇದೆಯೇ ಎಂಬ ಪ್ರಶ್ನೆಗೆ ನಟ ಮಾಧವನ್ ಕೊಟ್ಟ ಉತ್ತರವೇನು..?