Publish Date: Wed, 24 Jan 2018 (09:46 IST)
Updated Date: Wed, 24 Jan 2018 (09:50 IST)
ಮೈಸೂರು: ಸಿಎಂ ಸಿದ್ದರಾಮಯ್ಯ ಸದಾ ಗಂಭೀರ ಎಂದೇ ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಅವಕಾಶ ಸಿಕ್ಕಾಗಲೆಲ್ಲಾ ಅವರು ತಮ್ಮ ಹಳೆಯ ದಿನಗಳ ಚೇಷ್ಟೆಗಳನ್ನು ಸ್ಮರಿಸಿಕೊಂಡು ಕೇಳುಗರನ್ನು ನಗೆಗಡಲಲ್ಲಿ ತೇಲಿಸುತ್ತಾರೆ.
ಅಂತಹದ್ದೇ ಘಟನೆಯೊಂದನ್ನು ಅವರು ಮೆಲುಕು ಹಾಕಿಕೊಂಡಿದ್ದಾರೆ. ತಮ್ಮ ಬಾಲ್ಯದ ದಿನದಲ್ಲಿ ನಡೆದ ಘಟನೆಯೊಂದನ್ನು ಸಿಎಂ ನೆನಪಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ, ಬಾಲ್ಯದಲ್ಲಿ ತಾವು ಅದ್ಭುತ ನೃತ್ಯಪಟುವಾಗಿದ್ದೆ ಎಂದಿದ್ದಾರೆ.
ಹೀಗೇ ತಮ್ಮ ಸುತ್ತಮುತ್ತಲ ಗ್ರಾಮಗಳಲ್ಲಿ ಜಾತ್ರೆಗಳಿದ್ದರೆ ನೃತ್ಯ ಮಾಡುತ್ತಿದ್ದೆ. ಒಮ್ಮೆ ನನ್ನ ನೃತ್ಯ ನೋಡಿ ಸುತ್ತೂರು ಮಠದ ಅಂದಿನ ಸ್ವಾಮೀಜಿ, ಶ್ರೀ ರಾಜೇಂದ್ರ ಸ್ವಾಮೀಜಿ ಚೆನ್ನಾಗಿ ನೃತ್ಯ ಮಾಡುತ್ತೀಯ ಎಂದು 5 ರೂ. ನೀಡಿ ಬೆನ್ನುತಟ್ಟಿದ್ದರು ಎಂದು ಸಿಎಂ ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ