Publish Date: Tue, 27 Feb 2018 (08:24 IST)
Updated Date: Tue, 27 Feb 2018 (08:26 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ 4 ರ ವಿಜೇತ ಒಳ್ಳೆ ಹುಡುಗ ಪ್ರಥಮ್ ಒಂದು ಒಳ್ಳೆಯ ಕೆಲಸ ಮಾಡಿದ್ದು ಅದಕ್ಕೆ ಪ್ರೇರಣೆಯಾದವರ ಹೆಸರೂ ಬಹಿರಂಗಪಡಿಸಿದ್ದಾರೆ.
ದೇವ್ರಂಥಾ ಮನುಷ್ಯ ಎಂಬ ಸಿನಿಮಾ ಬಿಡುಗಡೆಯಾದ ಬಳಿಕ ಪ್ರಥಮ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುವ ಫ್ಯಾಮಿಲಿ ಪವರ್ ರಿಯಾಲಿಟಿ ಶೋ ದಲ್ಲಿ ಭಾಗವಹಿಸಿದ್ದ ಪ್ರಥಮ್ ಒಳ್ಳೆ ಕೆಲಸ ಮಾಡಿದ್ದಾರೆ.
ಪುನೀತ್ ರಾಜ್ ಕುಮಾರ್ ಪ್ರೇರಣೆಯಿಂದ ನೇತ್ರದಾನ ಮಾಡಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲ, ಈ ಬಗ್ಗೆ ಡಾ. ರಾಜ್ ಕುಮಾರ್ ಐ ಬ್ಯಾಂಕ್ ಗೆ ನೇತ್ರದಾನ ಮಾಡುವುದಾಗಿ ಒಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಮುಂದೊಂದು ದಿನ ಇಡೀ ಅಂಗ ದಾನ ಮಾಡಲೂ ಸಿದ್ಧರಿರುವುದಾಗಿ ಹೇಳಿದ್ದಾರೆ. ಸಾವಿನ ನಂತರ ತಮ್ಮ ದೇಹ ಹೀಗಾದರೂ ಉಪಯೋಗವಾಗಲಿ ಎಂದಿದ್ದಾರೆ. ಸಾಧ್ಯವಾದರೆ ನೀವು ನೇತ್ರದಾನ ಮಾಡಿ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ