ಶ್ರೀದೇವಿ ಸಾವಿಗೆ ಬಿಗ್ ಟ್ವಿಸ್ಟ್! ನಟಿ ಸಾವಿನ ಸೀಕ್ರೆಟ್ ಬಯಲು!

ಸೋಮವಾರ, 26 ಫೆಬ್ರವರಿ 2018 (16:39 IST)
ದುಬೈ: ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಸಾವಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಸಂಬಂಧಿಕರ ಮದುವೆಗೆ ದುಬೈಗೆ ಹೋಗಿದ್ದಾಗ ಹೋಟೆಲ್ ಕೊಠಡಿಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಶ್ರೀದೇವಿ ಸಾವಿಗೆ ನೈಜ ಕಾರಣ ಬಹಿರಂಗವಾಗಿದೆ.
 

ದುಬೈನ ಆಸ್ಪತ್ರೆಯಲ್ಲಿ ಶ್ರೀದೇವಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅದರ ವರದಿಗಳು ಇದೀಗ ಬಹಿರಂಗವಾಗಿದೆ. ಇದರ ಪ್ರಕಾರ ಶ್ರೀದೇವಿ ಸಾವಿಗೆ ಬಾತ್ ಟಬ್ ನಲ್ಲಿ ಆಕಸ್ಮಿಕವಾಗಿ ಬಿದ್ದಿರುವುದು ಕಾರಣ ಎಂದು ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ, ಅವರ ರಕ್ತದ ಮಾದರಿಯಲ್ಲಿ ಕೊಂಚ ಆಲ್ಕೋಹಾಲ್ ಕಂಟೆಂಟ್ ಕೂಡಾ ಪತ್ತೆಯಾಗಿತ್ತು.

ಇದುವರೆಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು ಎಂದು ಸುದ್ದಿ ಬಂದಿತ್ತು. ಆದರೆ ಇದೀಗ ಆಕಸ್ಮಿಕವಾಗಿ ಟಬ್ ನಲ್ಲಿ ನೀರಿಗೆ ಬಿದ್ದು ಸಾವನ್ನಪ್ಪಿರುವುದಾಗಿ ವರದಿ ಬಂದಿದೆ. ಇದೀಗ ಭಾರತೀಯ ರಾಯಭಾರಿ ಕಚೇರಿ ಹಾಗೂ ಕುಟುಂಬ ವರ್ಗದವರಿಗೆ ಈ ವರದಿಯನ್ನು ಪೊಲೀಸರು ಹಸ್ತಾಂತರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೊನೆಗೂ ಬಂತು ಫೊರೆನಿಕ್ಸ್ ವರದಿ; ಹೃದಯಾಘಾತದಿಂದಲೇ ನಟಿ ಶ್ರೀದೇವಿ ಸತ್ತಿದ್ದು!