ಶ್ರೀದೇವಿ ಮೃತದೇಹ ಭಾರತಕ್ಕೆ ಇನ್ನೂ ಬಂದಿಲ್ಲವೇಕೆ?

ಸೋಮವಾರ, 26 ಫೆಬ್ರವರಿ 2018 (09:13 IST)
ಮುಂಬೈ: ಶನಿವಾರ ರಾತ್ರಿ ದುಬೈನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ಬಾಲಿವುಡ್ ನಟಿ ಶ್ರೀದೇವಿ ಮೃತದೇಹ ಇನ್ನೂ ಭಾರತಕ್ಕೆ ಬಂದಿಲ್ಲ.
 

ಉದ್ಯಮಿ ಅನಿಲ್ ಅಂಬಾನಿಗೆ ಸೇರಿದ ಖಾಸಗಿ ಜೆಟ್ ವಿಮಾನದಲ್ಲಿ ನಿನ್ನೆ ರಾತ್ರಿಯಾ ಶ್ರೀದೇವಿ ಮೃತದೇಹ ಮುಂಬೈಗೆ ಆಗಮನವಾಗಲಿದೆ ಎನ್ನಲಾಗಿತ್ತು. ಆದರೆ ನಿನ್ನೆ ತಲುಪಿರಲಿಲ್ಲ.

ದುಬೈನಲ್ಲಿ ಮರಣೋತ್ತರ ಪರೀಕ್ಷೆ ವಿಧಿ ವಿಧಾನಗಳು ಮುಕ್ತಾಯವಾಗಿದೆ. ಇದಾದ ಬಳಿಕ ಕುಟುಂಬ ಸದಸ್ಯರು ಫೊರೆನ್ಸಿಕ್ ಲ್ಯಾಬ್ ವರದಿಗಾಗಿ ಕಾಯುತ್ತಿದ್ದು, ಅದು ಕೈ ತಲುಪಿದ ಮೇಲೆ ಮುಂಬೈಗೆ ಆಗಮಿಸಲಿದ್ದಾರೆ ಎನ್ನಲಾಗಿದೆ.

ಇಂದು ಮೃತದೇಹ ಮುಂಬೈಗೆ ಆಗಮನವಾಗಲಿದ್ದು, ಅದಾದ ಬಳಿಕ ಮುಂಬೈನಲ್ಲಿ ಇಂದು ಸಂಜೆ ಅವರ ಅಂತ್ಯಕ್ರಿಯೆ ನೆರವೇರಲಿದೆ. ಈ ಸಂದರ್ಭದಲ್ಲಿ ಬಾಲಿವುಡ್ ತಾರೆಯರ ದಂಡೇ ಹಾಜರಿರಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸರ್ಪ್ರೈಸ್ ಡಿನ್ನರ್ ಗೆ ತಯಾರಾಗಿದ್ದ ಶ್ರೀದೇವಿ! ಅಂತಿಮ ಕ್ಷಣಗಳು ಹೇಗಿದ್ದವು ಗೊತ್ತಾ?