Select Your Language

Notifications

webdunia
webdunia
webdunia
webdunia

ಜೆಕೆ ಅವರ ಕನಸಿನ ಹುಡುಗಿ ಹೇಗಿರಬೇಕಂತೆ ಗೊತ್ತಾ...?

ಜೆಕೆ ಅವರ ಕನಸಿನ ಹುಡುಗಿ ಹೇಗಿರಬೇಕಂತೆ ಗೊತ್ತಾ...?
ಬೆಂಗಳೂರು , ಶುಕ್ರವಾರ, 16 ಫೆಬ್ರವರಿ 2018 (05:59 IST)
ಬೆಂಗಳೂರು : ಬಿಗ್’ಬಾಸ್ ಮನೆಯಲ್ಲಿ ತಾಳ್ಮೆ, ಸಹನೆಯಿಂದ ಇದ್ದು ಎಲ್ಲರನ್ನು ತಮಾಷೆ ಮೂಲಕ ನಗಿಸುತ್ತಾ ಎಲ್ಲರ ಮನಗೆದ್ದ ಈಗ ಹುಡುಗಿಯರ ಡ್ರೀಮ್ ಬಾಯ್ ಆಗಿರುವ  ಜೆಕೆ ಅವರು ವ್ಯಾಲಂಟೈನ್ಸ್ ಡೇ ದಿನ ತಮ್ಮ  ಕನಸಿನ ಹುಡುಗಿ ಹೇಗಿರಬೇಕು ಎಂದು ಹೇಳಿದ್ದಾರೆ.


‘ಮೊದಲನೆಯದಾಗಿ ನಮ್ಮನ್ನು ಅರ್ಥ ಮಾಡಿಕೊಳ್ಳುವವರು ಮುಖ್ಯ. ಹಾಗೆ ಅರ್ಥ ಮಾಡಿಕೊಳ್ಳುವಂತವರು ಸಿಕ್ಕರೆ ನಾವೂ ಕೂಡ ಅರ್ಥ ಮಾಡಿಕೊಂಡು ಬದುಕಲು ಸಾಧ್ಯ. ಎರಡನೇಯದಾಗಿ ಮಾತು ಬೆಳ್ಳಿ, ಮೌನವೇ ಬಂಗಾರ ಎನ್ನುವ ಸೂತ್ರ ನನ್ನದು. ಮಾತುಗಳು ಅಗತ್ಯದಷ್ಟಿರಬೇಕು. ಮಾತಿಗಿಂತ ಮೌನವೇ ಭೂಷಣದಂತಿರಬೇಕು. ಮೂರನೇಯದಾಗಿ ಬದುಕಲ್ಲಿ ಮಾನವೀಯ ಮೌಲ್ಯಗಳು ಮುಖ್ಯ. ಹಿರಿಯರನ್ನು ಗೌರವಿಸಬೇಕು, ಕಿರಿಯರನ್ನು ಪ್ರೀತಿಸಬೇಕು. ಸಂಸ್ಕೃತಿ ಅನ್ನೋದು  ಆಚರಣೆಯಲ್ಲಿರಬೇಕು. ನಾಲ್ಕನೇಯದಾಗಿ ಲೈಫ್ ಈಸ್ ಬ್ಯೂಟಿಫುಲ್  ಎನ್ನುವ ಹಾಗೆ ಅದು ಸಿಂಪಲ್  ಆಗಿಯೂ ಇರಬೇಕು. ಅನಗತ್ಯ ವಿವಾದಗಳಲ್ಲಿ ನೆಮ್ಮದಿ ಕಳೆದುಕೊಳ್ಳಬಾರದು. ಐದನೇಯದಾಗಿ ಓದು, ಕೆಲಸ, ಸಾಮಾಜಿಕ ಸೇವೆ ಅಥವಾ ನಟನೆ. ಯಾವುದೇ ಕ್ಷೇತ್ರದಲ್ಲಿ ಸಾಧಿಸಬೇಕೆನ್ನುವ ಮನಸ್ಸಿಗೆ ಮುಕ್ತ ಭಾವದಿಂದ  ಬೆಂಬಲಿಸುವಂತಿರಬೇಕು’ ಎಂದು ಜೆಕೆ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೆನ್ಸೇಶನ್ ಪ್ರಿಯಾ ವಾರಿಯರ್ ಬಿಗ್‌ ಡ್ರೀಮ್ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ...!