Publish Date: Thu, 15 Feb 2018 (19:04 IST)
Updated Date: Thu, 15 Feb 2018 (19:07 IST)
ಇತ್ತೀಚಿನ ದಿನಗಳಲ್ಲಿ ಟಾಪ್ ಹಿರೋಯಿನ್‌ಗಳನ್ನು ಹಿಂದಿಕ್ಕಿ ಭಾರತದಲ್ಲಿ ಯುವಕರಿಗೆ ಹುಚ್ಚು ಹಚ್ಚಿರುವ ಕಿರುಗಣ್ಣಿನ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್ ಭಾರತದಾದ್ಯಂತ ತನ್ನ ಕಣ್ಣುಗಳ ಸನ್ನೆಯ ಮೂಲಕವೇ ಸೆನ್ಸೇಶನ್ ಉಂಟುಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ.
ಆದ್ರೆ ವಿಶ್ಯ ಅದಲ್ಲ ಇದೇ ಪ್ರಿಯಾ ವಾರಿಯಾರ್ ತನ್ನ ಇಸ್ಟ್ರಾಗ್ರಾಮ್ ಪುಟದಲ್ಲಿ ದುಲ್ಕರ್ ಸಲ್ಮಾನ್ ಮತ್ತು ರಿತು ವರ್ಮಾ ಅಭಿನಯದ ಮುಂಬರುವ ತಮಿಳು ಚಿತ್ರವಾದ ಕಣ್ಣುಂ ಕಣ್ಣುಂ ಕೊಳ್ಳೈಯಡಿತ್ತಾಲ್ ಚಿತ್ರದ ಪೋಸ್ಟರ್ ಅನ್ನು ಹಂಚಿದ್ದಲ್ಲದೇ ಅದರ ಕೆಳಗೆ ಹಾಕಿರುವ ಸ್ಟೇಟಸ್ ತುಂಬಾ ವೈರಲ್ ಆಗಿದೆ.
"ದುಲ್ಕರ್‌ನೊಂದಿಗೆ ನಟಿಸುವುದು ನನ್ನ ಅತೀ ದೊಡ್ಡ ಕನಸು" ಎಂದು ಪ್ರಿಯಾ ಸ್ಟೇಟಸ್ ಹಾಕಿದ್ದು, ಈ ಪೋಸ್ಟ್ ನೋಡಿದ ಎಲ್ಲರಿಗೂ ಮಲೆಯಾಳಂನ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್‌ನೊಂದಿಗೆ ನಟಿಸುವುದು ಪ್ರಿಯಾಳ ಕನಸು ಎಂಬುದು ಸ್ಪಷ್ಟವಾದಂತಿದೆ.
ಇತ್ತೀಚಿಗೆ ವೈರಲ್ ಆಗಿರುವ ವೀಡಿಯೊ ಓಮರ್ ಲುಲು ನಿರ್ದೇಶನದ ಮಲೆಯಾಳಂನ ಒರು ಆಡರ್ ಲವ್ ಚಿತ್ರದ ಮಾಣಿಕ್ಯ ಮಲರಾಯ ಪೂವಿ ಎಂಬ ಹಾಡಿನ ತುಣುಕಾಗಿದ್ದು ಸಾಮಾಜಿಕ್ ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆದಿದೆ ಎಂದೇ ಹೇಳಬಹುದು. ಈ ಹಾಡನ್ನು ಶಾನ್ ರಹಮಾನ್ ಸಂಯೋಜಿಸಿದ್ದು ವಿನೀತ್ ಶ್ರೀನಿವಾಸನ್ ಹಾಡಿದ್ದಾರೆ.
ಈ ವೀಡಿಯೊಗೆ ಇದೇ ಹಾಡನ್ನು ಬಳಸಿದ್ದು ಪ್ರಿಯಾಳ 1.32 ನಿಮಿಷದ ಕಣ್ಣೋಟಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಈಗಾಗಲೇ ಪ್ರಿಯಾ, ಒರು ಆಡರ್ ಲವ್ ಚಿತ್ರದಲ್ಲಿ ನಟಿಸಿದ್ದು, ಅವಳ ಈ ಕಣ್ಣ ನೋಟಕ್ಕೆ ಬೆರಗಾಗಿ ಬಾಲಿವೂಡ್‌ಗಳಿಂದಲೂ ಕರೆಗಳು ಬರುತ್ತಿವೆ ಎಂದು ಮೂಲಗಳಿಂದ ತಿಳಿದುಬಂದಿದೆ. ಒಟ್ಟಿನಲ್ಲಿ ಪ್ರಿಯಾ, ದುಲ್ಕರ್‌ನೊಂದಿಗೆ ನಟಿಸುವ ಕನಸು ಹೊಂದಿದ್ದು, ಅವರಿಬ್ಬರ ಜೋಡಿಯ ಚಿತ್ರ ವೀಕ್ಷಿಸಲು ಅಭಿಮಾನಿಗಳು ಕಾಯುತ್ತಿರುವುದಂತು ಸುಳ್ಳಲ್ಲ.