Select Your Language

Notifications

webdunia
webdunia
webdunia
webdunia

ಗಲ್ಲಾ ಪೆಟ್ಟಿಗೆಯಲ್ಲಿ ಅಬ್ಬರಿಸುತ್ತಿರುವ ಪದ್ಮವತ್‌ಗೆ ಫೀದಾ ಆದ ಪ್ರೇಕ್ಷಕ...!

ಗಲ್ಲಾ ಪೆಟ್ಟಿಗೆಯಲ್ಲಿ ಅಬ್ಬರಿಸುತ್ತಿರುವ ಪದ್ಮವತ್‌ಗೆ ಫೀದಾ ಆದ ಪ್ರೇಕ್ಷಕ...!

ಗುರುಮೂರ್ತಿ

ಬೆಂಗಳೂರು , ಸೋಮವಾರ, 5 ಫೆಬ್ರವರಿ 2018 (19:46 IST)
ಇತ್ತೀಚಿಗೆ ಹಲವಾರು ಸಂಕಷ್ಟಗಳನ್ನು ಎದುರಿಸಿ ತೆರೆಕಂಡಿದ್ದ ಬಾಲಿವೂಡ್ ಬಿಗ್ ಮೂವಿ ಪದ್ಮಾವತ್ ಇಂದು ಗಲ್ಲಾ ಪೆಟ್ಟಿಗೆಯಲ್ಲಿ 200 ಕೋಟಿ ಗಳಿಸುವ ಮೂಲಕ ಅಬ್ಬರಿಸುತ್ತಿದೆ. ಸಂಜಯಲಿಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿಬಂದ ಈ ಅದ್ಭುತ ಚಿತ್ರಕ್ಕೆ ಚಿತ್ರ ರಸಿಕರು ಮನ ಸೋತಿದ್ದು ಇನ್ನಷ್ಟು ಗಳಿಕೆಯತ್ತ ಈ ಚಿತ್ರ ಮುನ್ನುಗ್ಗುತ್ತಿದೆ.
13ನೇ ಶತಮಾನದ ರಾಜ ಪರಂಪರೆಯನ್ನು ತೆರೆಯ ಮೇಲೆ ತಂದಿರುವ ಈ ಚಿತ್ರದಲ್ಲಿ ರಣವೀರ್ ಸಿಂಗ್ ಕಿಲ್ಜಿಯಾಗಿ ಅಭಿನಯಿಸಿದ್ದು, ರಾಣಿ ಪದ್ಮಿನಿದೇವಿಯಾಗಿ ದಿಪೀಕಾ ಪಡುಕೋಣೆ ಅಭಿನಯಿಸಿದ್ದಾರೆ. ಅದಲ್ಲದೇ ಈ ಚಿತ್ರದಲ್ಲಿ ಶಾಹಿದ್ ಕಪೂರ್ ಮಹಾರ್‌ವಾಲ್ ರತನ್ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಜನರ ಮೆಚ್ಚುಗೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ ಈ ಚಿತ್ರದ ಎಲ್ಲಾ ಹಾಡುಗಳು ಅದ್ಭುತವಾಗಿದ್ದು, ಇದು ಕೂಡಾ ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಅಂತಾನೇ ಹೇಳಬಹುದು.
 
ಇತ್ತೀಚಿನ ವರದಿ ಪ್ರಕಾರ ಪದ್ಮಾವತ್ ಗಳಿಕೆಯು 200 ಕೋಟಿಯನ್ನು ಮೀರಿದೆ ಎಂದು ಹೇಳಲಾಗಿದೆ. ಅದಕ್ಕೆ ಪುಷ್ಟಿ ನೀಡುವಂತೆ ವಾಣಿಜ್ಯ ವಿಶ್ಲೇಷಕರಾದ ತರನ್ ಆದರ್ಶ್ ತಮ್ಮ ಟ್ವೀಟ್‌ನಲ್ಲಿ ಈ ಚಿತ್ರವು 212 ಕೋಟಿಗಳಿಕೆಯನ್ನು ಹೊಂದಿದೆ ಎಂದು ಟ್ವೀಟ್ ಮಾಡುವ ಮೂಲಕ ಅದನ್ನು ಖಚಿತಪಡಿಸಿದ್ದಾರೆ. ಅಷ್ಟೇ ಅಲ್ಲ ಎಲ್ಲಡೆ ಹೌಸ್ ಪುಲ್ ಪ್ರದರ್ಶನವನ್ನು ಕಾಣುತ್ತಿರುವ ಈ ಚಿತ್ರ ಬಾಕ್ಸ್ ಆಫೀಸ್‌ ಅನ್ನು ಕೊಳ್ಳೆ ಹೊಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತಿದೆ ಬಾಲಿವೂಡ್ ಲೋಕ.
webdunia
ಅದಲ್ಲದೇ ಈ ಚಿತ್ರದ ಕುರಿತಾದ ಸಂದರ್ಶನವೊಂದರಲ್ಲಿ ರಣವೀರ್ ಸಿಂಗ್ ಹೇಳಿಕೆ ನೀಡಿದ್ದು, ಇದೊಂದು ಉತ್ತಮ ಚಿತ್ರವಾಗಿದೆ. ನಾನು ಅಭಿನಯಿಸಿದ ಕಷ್ಟರಕವಾದ ಪಾತ್ರಗಳಲ್ಲಿ ಕಿಲ್ಜಿ ಪಾತ್ರವು ಒಂದಾಗಿದ್ದು, ಇಂತಹ ಒಂದು ಪಾತ್ರವನ್ನು ನನಗೆ ನೀಡಿದಕ್ಕಾಗಿ ನಿರ್ದೇಶಕ ಸಂಜಯ್‌ಲಿಲಾ ಬನ್ಸಾಲಿ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ ಎನ್ನಲಾಗಿದೆ.
 
ಹಲವು ಸಂಕಷ್ಟಗಳ ನಡುವೆಯು ಈ ಚಿತ್ರ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಫಲವಾಗಿದ್ದು, ದೀಪಿಕಾ, ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಮನೋಜ್ಞ ಅಭಿನಯಕ್ಕೆ ಪ್ರೇಕ್ಷಕ ಜೈಕಾರ ಹಾಕಿರುವುದು ಚಿತ್ರದ ಗಳಿಕೆಯಲ್ಲಿ ನಾವು ಕಾಣಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ಯಾಡ್‌ಮ್ಯಾನ್ ಚಾಲೆಂಜ್‌ಗೆ ಸ್ಯಾನಿಟರಿ ನ್ಯಾಪ್ಕಿನ್ ಹಿಡಿದು ಫೋಟೋ ಪ್ರಕಟಿಸಿದ ಸ್ಟಾರ್‌ಗಳು